ಕರ್ನಾಟಕ

ಹೆಂಡತಿ ಹತ್ಯೆಯಾಗಿ 5 ದಿನದಲ್ಲಿ ದಂತವೈದ್ಯ ಆತ್ಮಹತ್ಯೆ

Pinterest LinkedIn Tumblr


ಚಿಕ್ಕಮಗಳೂರು: ಕಡೂರು ಪಟ್ಟಣವನ್ನೇ ಬೆಚ್ಚಿಬೀಳಿಸಿದ ಕವಿತಾ ಕೊಲೆ ಪ್ರಕರಣ ಮಾಸುವ ಮುಂಚೆಯೇ ಇದೀಗ ಕವಿತಾ ಅವರ ಪತಿ ಡಾ.ರೇವಂತ್ ಕಡೂರು ಅವರು ಬಂಡಿಕೊಪ್ಪಲು ರೈಲ್ವೆ ಗೇಟ್ ಸಮೀಪ ಶನಿವಾರ
ಬೆಳ್ಳಗ್ಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕಳೆದ ಸೋಮವಾರ ಸಂಜೆ ಕವಿತಾ ಹಾಗೂ ಆರು ತಿಂಗಳ ಮಗು ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆಗೆ ಬಂದ ಅಪರಿಚಿತರು ಕವಿತಾ ಅವರ ಕತ್ತು ಸೀಳಿ ಕೊಲೆ ಮಾಡಿ ಮನೆಯಲ್ಲಿದ್ದ ನಗದು, ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿದ್ದರು.

ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಡಾ. ರೇವಂತ್ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Comments are closed.