
ಬೆಂಗಳೂರು: ಫ್ರೀ ಕಾಶ್ಮೀರ ಭಿತ್ರಿಪತ್ರ ಹಿಡಿದು ಬಂಧನಕ್ಕೆ ಒಳಗಾದ ಆರುದ್ರ ತಮ್ಮ ಸ್ವ ಇಚ್ಛಾ ಹೇಳಿಕೆಯಲ್ಲಿ, ತಾನು ಪ್ಲಕಾರ್ಡ್ ಹಿಡಿದಿದ್ದು ಯಾಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಆರುದ್ರ ಅಲಿಯಾಸ್ ಅನ್ನಪೂರ್ಣೇಶ್ವರಿಯಾದ ನಾನು ಸಿಎಎ, ಎನ್ಆರ್ಸಿ ಮತ್ತು ಆರ್ಟಿಕಲ್ 370 ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳಿಂದ ಪ್ರಚೋದನೆಗೆ ಒಳಗಾಗಿದ್ದೆ.
ಎಲ್ಲೆಲ್ಲಿ ಸಿಎಎ, ಎನ್ಆರ್ಸಿ ವಿರುದ್ಧ ನಡೆಯುತ್ತಿತ್ತೋ ಅಲ್ಲೆಲ್ಲ ನಾನೂ ಭಾಗಿಯಾಗುತ್ತಿದ್ದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕಾರ್ಯಕ್ರಮಗಳು ಇದ್ದುದು ಕಂಡುಬಂದರೆ ಅಲ್ಲಿ ನಾನೇ ಮುಂದಾಗಿ ಹೋಗುತ್ತಿದ್ದೆ. ನಿನ್ನೆಯೂ ಕೂಡ ಅಮೂಲ್ಯ ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ತೆರಳಿದ್ದೆ. ಈ ವೇಳೆ ಅಮೂಲ್ಯ ಪಾಕಿಸ್ತಾನ ಜಿಂದಾಬಾಂದ್ ಎಂದು ಹೇಳಿದಾಗ ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದರು.
ಅದಾದ ಬಳಿಕ ಅಮೂಲ್ಯ ವಿರುದ್ಧವಾಗಿ ಹಿಂದೂ ಪರ ಸಂಘಟನೆಗಳು ಟೌನ್ಹಾಲ್ ಬಳಿ ಸೇರಿದ್ದವು. ಅದಕ್ಕಾಗಿ ನಾನು ರಟ್ಟಿನಿಂದ ತಯಾರಿಸಿದ ಮುಸಲ್ಮಾನ್ ಹಾಗೂ ದಲಿತರನ್ನ ಮುಕ್ತಗೊಳಿಸಿ, ಫ್ರೀ ಕಾಶ್ಮೀರ ಎಂಬ ಇಂಗ್ಲಿಷ್ ಹಾಗೂ ಕನ್ನಡದ ಬರಹಗಳಿರುವ ಸಂದೇಶಗಳನ್ನು ಬರೆದು ಇಟ್ಟುಕೊಂಡಿದ್ದೆ. ಅಮೂಲ್ಯ ವಿರುದ್ಧ ಪ್ರತಿಭಟನೆಗೆ ಹಿನ್ನಡೆಯಾಗುವಂತೆ ಮಾಡಲು ಅವುಗಳನ್ನು ಪ್ರದರ್ಶಿಸಿದೆ ಎಂದು ಪ್ಲಕಾರ್ಡ್ ಪ್ರದರ್ಶನ ಮಾಡಿದ್ದಾಗಿ ಆರುದ್ರಾ ಹೇಳಿದ್ದಾಳೆ.
Comments are closed.