ಕರ್ನಾಟಕ

ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಕರೆದ್ಕೊಂಡು ಹೋಗಿ ಮರ್ಮಾಂಗ ಕತ್ತರಿಸಿದ ದುಷ್ಕರ್ಮಿಗಳು

Pinterest LinkedIn Tumblr

ಮಂಡ್ಯ: ಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿಯನ್ನು ಕಾರಿನಲ್ಲಿ ಕೂರಿಸಿಕೊಂಡ ದುಷ್ಕರ್ಮಿಗಳು ಆತನ ಮರ್ಮಾಂಗ ಕತ್ತರಿಸಿರುವ ಅಮಾನವೀಯ ಘಟನೆ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.

ವಿದ್ಯಾರ್ಥಿಯು ಕೆ.ಆರ್.ಪೇಟೆ ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ಹೋಗಲು ಪಾಂಡವಪುರ ತಾಲೂಕಿನ ಸೀತಾಪುರ ಗೇಟ್ ಬಳಿ ನಿಂತಿದ್ದ. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಎಲ್ಲಿಗೆ ಹೋಗ ಬೇಕು ಎಂದು ಕೇಳಿದ್ದರು. ಆಗ ವಿದ್ಯಾರ್ಥಿಯು, ನಾನು ಕೆ.ಆರ್.ಪೇಟೆಗೆ ಹೋಗಬೇಕು ಎಂದು ಹೇಳಿದ್ದರು. ಆದಕ್ಕೆ ದುಷ್ಕರ್ಮಿಗಳು, ‘ಬಾ ನಮ್ಮ ಜೊತೆ. ನಾವು ಆ ಕಡೆನೇ ಹೋಗುತ್ತಿದ್ದೇವೆ ಎಂದು ಕಾರಿನಲ್ಲಿ ಕರೆದಿದ್ದರು. ಆದರೆ ವಿದ್ಯಾರ್ಥಿ, ಇಲ್ಲ ನಾನು ಬಸ್‍ಗೆ ಕಾಯುತ್ತಿದ್ದೇನೆ. ಬಸ್‍ನಲ್ಲೇ ಹೋಗುತ್ತೇನೆ ಅಂತ ಹೇಳಿದಾಗ ದುಷ್ಕರ್ಮಿಗಳು, ಹೇ ಪರವಾಗಿಲ್ಲ ಬಾ ಎಂದು ಕಾರಿನಲ್ಲಿ ಕರೆದೊಯ್ದಿದ್ದರು.

ಐದು ಕಿ.ಮೀ ದೂರ ಸಾಗಿದ ಬಳಿಕ ದುಷ್ಕರ್ಮಿಗಳು ವಿದ್ಯಾರ್ಥಿಯ ಮರ್ಮಾಂಗವನ್ನು ಕಾರಿನಲ್ಲೇ ಕತ್ತರಿಸಿದ್ದಾರೆ. ಬಳಿಕ ಆತನನ್ನು ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಈ ವೇಳೆ ವಿದ್ಯಾರ್ಥಿ ನರಳಾಡುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ವಿದ್ಯಾರ್ಥಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಯದಿಂದ ವಿದ್ಯಾರ್ಥಿ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ದುಷ್ಕರ್ಮಿಗಳು ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಪೊಲೀಸರು ದುಷ್ಕರ್ಮಿಗಳ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

Comments are closed.