ಕರ್ನಾಟಕ

ಕೇಂದ್ರ ಬಜೆಟ್‌: ರೈತರು, ಯುವಕರಿಗೆ ಆಶಾದಾಯಕವಾಗಿಲ್ಲ: ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ಕೇಂದ್ರ ಬಜೆಟ್‌ 2020 ರೈತರು ಹಾಗೂ ಯುವಕರ ಪಾಲಿಗೆ ಆಶಾದಾಯಕವಾಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಘೋಷಣೆಯಾಗಿರುವ 16 ಅಂಶಗಳ ಕಾರ್ಯಕ್ರಮಗಳ ಪೈಕಿ ಒಂಬತ್ತು ಅಂಶಗಳು ಕಾರ್ಪೋರೇಟರ್‌ ಫಾರ್ಮಿಂಗ್‌ಗೆ ಸಂಬಂಧಿಸಿದವು. ಈ ಮೂಲಕ ಕೃಷಿ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಈ ನಿಟ್ಟಿನಲ್ಲಿ ನೋಡುವುದಾದರೆ ಬಜೆಟ್‌ 2020 ಖಾಸಗಿ ಕಂಪನಿಗಳಿಗೆ ಅನುಕೂಲವೇ ಹೊರತು ರೈತರು ಹಾಗೂ ಯುವಕರ ಪಾಲಿಗಲ್ಲ ಎಂದಿದ್ದಾರೆ.

ಸರ್ವಜನಾಂಗದ ಏಳಿಗೆಗೆ ಈ ಬಜೆಟ್ -ಡಿಸಿಎಂ ಕಾರಜೋಳ
ಕೇಂದ್ರ ಬಜೆಟ್‌ ಸರ್ವ ಜನಾಂಗದ ಏಳಿಗೆಗೆ ಒತ್ತು ಕೊಟ್ಟಿದೆ ಎಂದು ಡಿಸಿಎಂ ಗೋವಿಂದ್‌ ಕಾರಜೋಳ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಕಣ್ಣೊರೆಸುವ ಬಜೆಟ್ ಅಲ್ಲ, ಕಣ್ಣು ತೆರೆಸುವ ಬಜೆಟ್ ಎಂದು ಬಣ್ಣಿಸಿದ್ದಾರೆ.

ದೇಶದ 130 ಕೋಟಿ ಜನರು ಹೆಮ್ಮೆ ಪಡುವ ಬಜೆಟ್ ಆಗಿದೆ. ಸ್ವಾತಂತ್ರ್ಯ ಬಂದ ನಂತರದಲ್ಲಿ ದಲಿತರ ಕಲ್ಯಾಣಕ್ಕಾಗಿ ಅತಿ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಯೋಜನೆ 3.70 ಲಕ್ಷ ಕೋಟಿ ಅನುದಾನ ಹಾಗೂ ಬೆಂಗಳೂರು ಸಬ್- ಅರ್ಬನ್ ರೈಲು ಯೋಜನೆಗೂ 60 ಶೇ ಅನುದಾನ ಕೇಂದ್ರದಿಂದ ಸಿಕ್ಕಿರುವುದು ಸಂತಸ ತಂದಿದೆ ಎಂದರು.

Comments are closed.