ಕರ್ನಾಟಕ

ಕೊಪ್ಪಳದಲ್ಲಿರುವ ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ಖಚಿತ: ಪ್ರಹ್ಲಾದ ಜೋಶಿ

Pinterest LinkedIn Tumblr


ಧಾರವಾಡ: ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಭಾರತದಲ್ಲಿ ನೆಲೆಸಿರುವ ಯಾವುದೇ ಧರ್ಮೀಯರಿಗೂ ತೊಂದರೆ ಆಗದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದ್ದಾರೆ.

ನಗರದಲ್ಲಿ ವಿವಿಧ ಸಮಾಜದ ಮುಖಂಡರ ಮನೆಗಳಿಗೆ ಭೇಟಿ ನೀಡಿ ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಕಾಯ್ದೆ ತಿದ್ದುಪಡಿ ಕುರಿತು ಜನಜಾಗೃತಿ ಮೂಡಿಸಲು ಕೇಂದ್ರ ಸರಕಾರ ಅಭಿಯಾನ ಆಯೋಜಿಸಿದೆ. ಒಂದು ತಿಂಗಳಲ್ಲಿ ಮೂರು ಕೋಟಿ ಮನೆಗಳನ್ನು ಸಂಪರ್ಕಿಸಲು ತೀರ್ಮಾನಿಸಲಾಗಿದೆ ಎಂದರು.

ದೇಶದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಅನಂತರ ಧಾರ್ಮಿಕ ಆಧಾರದಡಿ ಜನರನ್ನು ಒಡೆಯುವ ಷಡ್ಯಂತ್ರವನ್ನು ಕಾಂಗ್ರೆಸ್‌ ಮತ್ತದರ ಮಿತ್ರಪಕ್ಷಗಳು ಮಾಡುತ್ತಿವೆ. ಧಾರ್ಮಿಕ ಅತ್ಯಾಚಾರಕ್ಕೆ ಒಳಗಾಗಿ ವಿದೇಶಗಳಿಂದ ಬಂದ ಹಿಂದೂಗಳಿಗೆ ಪೌರತ್ವ ಕೊಡಲು ಕಾಂಗ್ರೆಸ್‌ ವಿರೋಧಿ ಸುತ್ತಿದೆ. ಧಾರ್ಮಿಕ ಅತ್ಯಾಚಾರಕ್ಕೆ ಒಳಗಾಗಿ ಪಾಕಿಸ್ಥಾನ, ಬಾಂಗ್ಲಾ, ಅಫ್ಘಾನಿಸ್ಥಾನ ಇತ್ಯಾದಿ ದೇಶಗಳಿಂದ ವಲಸೆ ಬಂದ ಹಿಂದೂ, ಕ್ರೈಸ್ತ, ಸಿಕ್ಖ್, ಬೌದ್ಧ, ಜೈನ ಇತ್ಯಾದಿ ಧರ್ಮೀಯರಿಗೆ ಪೌರತ್ವ ಕೊಡುವುದಕ್ಕೆ ವಿರೋಧ ಏಕೆ ಎನ್ನುವ ಪ್ರಶ್ನೆಗೆ ಕಾಂಗ್ರೆಸ್‌ ಇಂದಿಗೂ ಉತ್ತರಿಸಿಲ್ಲ ಎಂದರು.

ಕೊಪ್ಪಳದಲ್ಲಿರುವ ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ಬರುವುದು ಖಚಿತ. ಈ ಬಗ್ಗೆ 2004ರಲ್ಲಿ ಸಂಗಣ್ಣ ಕರಡಿ ಪತ್ರ ಬರೆದಿದ್ದರು. ಹೊರ ದೇಶದಲ್ಲಿನ ಭಾರತೀಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸ್ವತಃ ಗಾಂ ಧೀಜಿ ಹೇಳಿದ್ದರು. ಇದೀಗ ಗಾಂ ಧೀಜಿ ಹೇಳಿದ್ದು ತಪ್ಪು ಎನ್ನುವ ಮನಃಸ್ಥಿತಿಗೆ ಕೈ ನಾಯಕರು ಬಂದಿರುವುದು ದುರಂತ. ಕೈ ನಾಯಕರ ಇಂಥ ಮನಃಸ್ಥಿತಿಯಿಂದ ಕಾಂಗ್ರೆಸ್‌ ಅವಸಾನದತ್ತ ಸಾಗಿದೆ. ಅಪಪ್ರಚಾರ ಬಿಟ್ಟು ದೇಶದ ಹಿತ ಕಾಯುವ ಕೆಲಸಕ್ಕೆ ಕೈ ಜೋಡಿಸಲು ಮನವಿ ಮಾಡಿದರು.

Comments are closed.