ಕರ್ನಾಟಕ

ಚಾರ್ಮಾಡಿ ಘಾಟಿ: ಮಿನಿ ಬಸ್‌ಗಳಿಗೆ ಮಾತ್ರ ಅನುಮತಿ

Pinterest LinkedIn Tumblr


ಚಿಕ್ಕಮಗಳೂರು: ಭಾರಿ ಮಳೆಯಿಂದ ತೀವ್ರ ಹಾನಿಗೊಂಡಿದ್ದ ಚಾರ್ಮಾಡಿ ಘಾಟಿ ರಸ್ತೆಯಲ್ಲಿರಾಜ್ಯ ರಸ್ತೆ ಸಾರಿಗೆ ನಿಗಮದ ಮಿನಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಆದೇಶಿಸಿದ್ದಾರೆ.

ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ-73ರಲ್ಲಿಭಾರಿ ಮಳೆಯಿಂದ ತೀವ್ರ ಹಾನಿಗೊಂಡಿದ್ದ ಕಾರಣ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ 2019 ನವೆಂಬರ್‌ 28ರಂದು ಆದೇಶಿಸಲಾಗಿತ್ತು. ಆದರೆ, ಕೆಎಸ್ಸಾರ್ಟಿಸಿ ಚಿಕ್ಕಮಗಳೂರು ವಿಭಾಗ, ರಾಷ್ಟ್ರೀಯ ಹೆದ್ದಾರಿ ಬೇಲೂರು ಉಪ ವಿಭಾಗದ ಅಧಿಕಾರಿಗಳು ಕೆಎಸ್ಸಾರ್ಟಿಸಿ ಶಿವಮೊಗ್ಗ ವಿಭಾಗದಿಂದ ಮಿನಿ ಬಸ್‌ ತರಿಸಿಕೊಂಡು ಚಾರ್ಮಾಡಿ ಮಾರ್ಗದ ಸಮೀಕ್ಷೆ ನಡೆಸಿದ್ದು, ಮಿನಿ ಬಸ್‌ ಸಂಚಾರಕ್ಕೆ ಅನುಮತಿ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿಡಿ.25 ರಿಂದ ಮುಂದಿನ ಆದೇಶದವರೆಗೆ ನಿಬಂಧನೆಗಳಿಗೆ ಒಳಪಟ್ಟು ಪ್ರತಿದಿನ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಕಾಲಮಿತಿ ನಿಗದಿಸಿ ಕೆಎಸ್ಸಾರ್ಟಿಸಿ ಮಿನಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಎಲ್ಲ ರೀತಿಯ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಿಬಂಧನೆಗಳೇನು?
ಚಾರ್ಮಾಡಿ ಘಾಟಿ ಮಾರ್ಗದಲ್ಲಿಅಗತ್ಯ ಇರುವ ಸ್ಥಳಗಳಲ್ಲಿಹಾಸನ ರಾಷ್ಟ್ರೀಯ ಹೆದ್ದಾರಿ ವಿಭಾಗದವರು ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅಪಘಾತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅವಕಾಶ ಕಲ್ಪಿಸಿರುವ ಲಘು ವಾಹನಗಳು ಮತ್ತು ಕೆಎಸ್ಸಾರ್ಟಿಸಿ ಮಿನಿ ಬಸ್‌ಗಳ ವೇಗದ ಮಿತಿಯನ್ನು ಪ್ರತಿ ಗಂಟೆಗೆ 20ಕಿ.ಮೀ ಮೀರದಂತೆ ನೋಡಿಕೊಳ್ಳಬೇಕು. ಘಾಟಿಯಲ್ಲಿಬಹಳಷ್ಟು ಕಡೆ ಭೂಕುಸಿತದಿಂದ ರಸ್ತೆಗೆ ತೀವ್ರ ಧಕ್ಕೆ ಉಂಟಾಗಿರುವುದರಿಂದ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು. ಈ ಭಾಗದಲ್ಲಿ ಫೋಟೊ, ಸೆಲಿಧಿ ತೆಗೆಯುವುದನ್ನು ನಿಷೇಧಿಸಲಾಗಿದೆ.

ಯಾವ ವಾಹನಗಳು ಸಂಚರಿಸಬಹುದು?
ಚಾರ್ಮಾಡಿ ಘಾಟಿ ರಸ್ತೆಯಲ್ಲಿಕಾರು, ಜೀಪು, ಟೆಂಪೊ, ವ್ಯಾನ್‌, ಎಲ್‌ಸಿವಿ (ಮಿನಿ ವ್ಯಾನ್‌) ಹಾಗೂ ದ್ವಿಚಕ್ರ ವಾಹನಗಳು, ಅಂಬುಲೆನ್ಸ್‌, ರಾಜ್ಯ ರಸ್ತೆ ಸಾರಿಗೆ ನಿಗಮದ ಮಿನಿ ಬಸ್‌ಗಳು ಸಂಚರಿಸಬಹುದು. ಬುಲೆಟ್‌ ಟ್ಯಾಂಕರ್ಸ್‌, ಷಿಪ್‌ ಕಾರ್ಗೊ ಕಂಟೈನರ್ಸ್‌, ಲಾಂಗ್‌ ಚಾಸೀಸ್‌ ವಾಹನಗಳು, ಹೆವಿ ಕಮರ್ಷಿಯಲ್‌ ವಾಹನಗಳು, ಮಲ್ಟಿ ಎಕ್ಸೆಲ್‌ ಟ್ರಕ್‌, ಟ್ರಕ್‌ ಟ್ರೈಲರ್‌, ಬಸ್‌ಗಳು, ರಾಜಹಂಸ ಸೇರಿದಂತೆ ಎಲ್ಲಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

Comments are closed.