
ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಚಲನಚಿತ್ರ ನಟಿ ಶೃತಿಯ ಕಾರು ಚಾಲನೆ ಮಾಡುತ್ತಿದ್ದ ಮಾಜಿ ಚಾಲಕ ಮಂಗಳವಾರ ರಾತ್ರಿ ಮಾಚೋವಳ್ಳಿ ಅರಣ್ಯ ವಲಯದಲ್ಲಿ ನೇಣಿಗೆ ಶರಣಾಗಿದ್ದಾನೆ. ಈತ ಅನುಮಾನಾಸ್ಪದವಾಗಿ ಸಾವಿಗೆ ಶರಣಾಗಿರೋದು ಹಲವು ಅನುಮಾನಗಳನ್ನು ಹುಟುಹಾಕಿದೆ.
ಮಂಜುನಾಥ್ ಸಿಂಗ್(25) ನೇಣಿಗೆ ಶರಣಾದ ವ್ಯಕ್ತಿ. ಈತ ಚಿಕ್ಕಮಗಳೂರು ಜಿಲ್ಲೆಯ ಜಾವಗಲ್ ಸಮೀಪದ ಬೆಳವಾಡಿ ಗ್ರಾಮದ ನಿವಾಸಿ. ನೆಲಮಂಗಲ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಾಚೋಹಳ್ಳಿ ಗ್ರಾಮದಲ್ಲಿ 15 ವರ್ಷಗಳಿಂದ ತಂದೆ ತಾಯಿಯ ಜೊತೆ ಮಂಜುನಾಥ್ ವಾಸವಾಗಿದ್ದ. ಮಂಗಳವಾರ ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದ. ಇದಾದ ಬಳಿಕ, ಮಾಗಡಿ ರಸ್ತೆಯ ಮಾಚೋಹಳ್ಳಿಯ ಅರಣ್ಯ ವಲಯದಲ್ಲಿ ಮರಕ್ಕೆ ಟವಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತ ಮಂಜುನಾಥ್, ಎರಡು ವರ್ಷಗಳ ಕಾಲ ನಟಿ ಶೃತಿ ಅವರ ಕಾರು ಚಾಲಕನಾಗಿದ್ದ. 1 ವರ್ಷದ ಹಿಂದೆ ಕೆಲಸ ಬಿಟ್ಟಿದ್ದ ಎಂದು ಪೋಷಕರು ತಿಳಿಸಿದ್ದಾರೆ. ಮಾಚೋವಳ್ಳಿಯ ನಿವಾಸಿ ಮಂಜುನಾಥ್ ಸಿಂಗ್ ಅರಣ್ಯ ವಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, 8 ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದ ಎಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಸ್ನೇಹಿತರೊಂದಿಗೆ ಮಧ್ಯಪಾನ ಮಾಡಿ ನೇಣಿಗೆ ಶರಣಾಗಿದ್ದಾನೆ.
ಈ ಹಿಂದೆ ಈತ ನಟಿ ಶೃತಿ ಅವರ ಕಾರು ಚಾಲಕನಾಗಿರುವ ಮಾಹಿತಿ ಇದೆ. ಆದರೆ ಈಗ ಅವರಿಗೂ ಇವನಿಗೂ ಸಂಬಂಧವಿಲ್ಲ ಎಂದು ಮಾದನಾಯಕನಹಳ್ಳಿ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.
ಅನುಮಾನ..! : ಮಂಜುನಾಥ್ ಸಿಂಗ್ ಒಳ್ಳೆಯ ಹುಡುಗ, ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗುವವನಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಮಂಜುನಾಥ್ ಸಾವಿನಲ್ಲಿಅನುಮಾನವಿದೆ ಎಂದು ಪೋಷಕರು ಹೇಳಿದ್ದಾರೆ. ಆದರೆ ಮಾದನಾಯಕನಹಳ್ಳಿ ಪೊಲೀಸರು ಈತ ಕುಡಿದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
Comments are closed.