
ಬೆಂಗಳೂರು: ಮದುವೆಗೆ ಇನ್ನೇನು ಮೂರು ದಿನ ಬಾಕಿ ಇದೆ ಎನ್ನುವಾಗ ಮದುವೆಯಿಂದ ತಪ್ಪಿಸಿಕೊಳ್ಳಲು ತನಗೆ ಎಚ್ಐವಿ ಸೋಂಕಿದೆ ಎಂದು ವರ ನಾಟಕ ಮಾಡಿ ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಕಿರಣ್ ಸುಳ್ಳು ಹೇಳಿ ಸಿಕ್ಕಿಬಿದ್ದ ವರ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಮದುವೆಯನ್ನು ಡಿಸೆಂಬರ್ 1ರಂದು ಮಾಡಲು ಕುಟುಂಬಸ್ಥರು ನಿಶ್ಚಯಿಸಿದ್ದರು. ವಧುವಿನ ಮನೆಯವರು ಕೂಡ ಅದ್ಧೂರಿಯಾಗಿ ಮಗಳ ಮದುವೆ ಮಾಡಲು ನಿರ್ಧರಿಸಿ, ಇದಕ್ಕಾಗಿ 15 ಲಕ್ಷ ವ್ಯಯಿಸಿದ್ದರು.
ಇನ್ನೇನು ಮದುವೆಗೆ 3 ದಿನ ಇದೆ ಎನ್ನುವಾಗ ಕಿರಣ್, ನನಗೆ ಎಚ್ಐವಿ ಸೋಂಕಿದೆ. ಮದುವೆ ನಿಲ್ಲಿಸುವಂತೆ ಯುವತಿಗೆ ತಿಳಿಸಿದ್ದಾನೆ. ವರನ ಮಾತು ಕೇಳಿ ತಬ್ಬಿಬ್ಬುಕೊಂಡ ಯುವತಿ ಪೋಷಕರು ಮಣಿಪಾಲ್ ಆಸ್ಪತ್ರೆಯ ವೈದ್ಯರನ್ನು ಕರೆಸಿ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ವರನಿಗೆ ಯಾವುದೇ ಸೋಂಕು ಇಲ್ಲ ಎಂಬುದು ಪತ್ತೆಯಾಗಿದೆ.
ಈತನ ನಾಟಕದಿಂದ ನೊಂದ ಯುವತಿ, ಕಡೆಗೆ ವಿಜಯನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ. ಇನ್ನು ಈ ಕುರಿತು ವಿಚಾರಣೆ ನಡೆಸಿದ ಪೊಲೀಸರಿಗೆ ಯುವತಿ ನನ್ನ ಜೊತೆ ಸರಿಯಾಗಿ ಮಾತನಾಡುವುದಿಲ್ಲ. ಆಕೆ ಬಿಯರ್ ಕೊಡಿಸುವಂತೆ ಕೇಳುತ್ತಾಳೆ ಎಂದು ಸಬೂಬು ಹೇಳಿದ್ದು, ಸದ್ಯ ಪ್ರಕರಣ ಇತ್ಯರ್ಥಕ್ಕೆ ಪೊಲೀಸರು ಹರಸಾಹಸ ನಡೆಸಿದ್ದಾರೆ.
Comments are closed.