ಕರ್ನಾಟಕ

ಬಿರಿಯಾನಿ ಜೊತೆ ಈರುಳ್ಳಿ ಕೊಡದಿದ್ದಕ್ಕೆ ಮಾರಾಮಾರಿ

Pinterest LinkedIn Tumblr


ಬೆಳಗಾವಿ: ಈರುಳ್ಳಿ ದರ ಮುಗಿಲು ಮುಟ್ಟಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ನಗರದ ಹೊಟೇಲ್ ನಲ್ಲಿ ಬಿರ್ಯಾಣಿ ಜೊತೆಗೆ ಈರುಳ್ಳಿ ಕೊಡಲಿಲ್ಲ ಎಂಬ ಕಾರಣಕ್ಕೆ ಮಾರಾಮಾರಿಯಾಗಿ ಇಬ್ಬರು ಯುವಕರು ಗಾಯಗೊಂಡಿದ್ದಾರೆ.

ವಿಶ್ವೇಶ್ವರಯ್ಯ ನಗರದ ಕಿರಣ ಶ್ರೀಕಾಂತ ಹಾದಿಮನಿ(೧೯) ಹಾಗೂ ಅಂಕುಶ ಪ್ರಕಾಶ ಚಳಗೇರಿ(೨೪) ಎಂಬ ಯುವಕರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಹೊರ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ನೆಹರು ನಗರದ ರಾಮದೇವ ಬಳಿ‌ ಇರುವ ಹೊಟೇಲ್ ಗೆ ಕಿರಣ ಹಾಗೂ ಅಂಕು ಎಂಬ ಯುವಕರು ಊಟಕ್ಕೆ ಹೋಗಿದ್ದರು. ‌ಆಗ ಬಿರ್ಯಾಣಿ ಆರ್ಡರ್ ಮಾಡಿದ್ದ ಇವರಿಗೆ ಊಟದ ಜೊತೆಗೆ ಈರುಳ್ಳಿ ಕೊಟ್ಟಿರಲಿಲ್ಲ. ಆಗ ಈರುಳ್ಳಿ ಕೊಡುವಂತೆ ಕೇಳಿದಾಗ, ಈರುಳ್ಳಿ ದರ ಹೆಚ್ಚಾಗಿರುವುದರಿಂದ ಈರುಳ್ಳಿ ಕೊಡುತ್ತಿಲ್ಲ ಎಂದು ವೇಟರ್ ಉತ್ತರಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ವೇಟರ್ ಹಾಗೂ ಯುವಕರ‌ ಮಧ್ಯೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ. ಚಮಚೆ ಹಾಗೂ ಕಟ್ಟಿಗೆಗಳಿಂದ ಹೊಡೆದಾಟವಾಗಿದೆ. ಇದರಲ್ಲಿ ಕಿರಣ ಹಾಗೂ ಅಂಕುಶಗೆ ಸ್ವಲ್ಪ ಗಾಯವಾಗಿತ್ತು.

Comments are closed.