ಕರ್ನಾಟಕ

ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಾ ಯುವಕ ಸಾವು

Pinterest LinkedIn Tumblr


ಕಲಬುರಗಿ: ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪೂರ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.‌

ಚಿತ್ತಾಪುರ ತಾಲೂಕಿನ ಹೊಸುರು ಗ್ರಾಮದಲ್ಲಿ ಡ್ಯಾನ್ಸ್ ಮಾಡುತ್ತಿರುವುದಾಗ ಏಕಾಏಕಿ ಯುವಕ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾನೆ. 24 ವರ್ಷದ ಅಶೋಕ‌ ಎಂಬಾತನೇ ಮೃತ ಯುವಕ.

ರಾತ್ರಿ ಸಂಬಂಧಿಕರ ಮದುವೆ ದಿಬ್ಬಣದಲ್ಲಿ ಆಶೋಕ‌ ಸುಮಾರು ಹೊತ್ತು‌ ಕಣಿಯುತ್ತಿದ್ದ. ಕುಣಿಯುತ್ತಾ, ಕುಣಿಯುತ್ತಾ ಕೆಳಗಡೆ ಮಲಗಿಕೊಂಡು ಡ್ಯಾನ್ಸ್ ‌ಮಾಡುವಾಗ ಅಲ್ಲೇ ಅಸುನೀಗಿದ್ದಾನೆ. ನ.30ರಂದು ಈ ಘಟನೆ ಜರುಗಿದೆ.‌ ಅಶೋಕನ ಸಾವಿನ ಕೊನೆಯ ಕ್ಷಣಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.‌

Comments are closed.