ಬೆಳಗಾವಿ/ಚಿಕ್ಕೋಡಿ: ಮದುವೆ ದಿನವೇ ವರ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.
ಸುನಿಲ್ ಪಾಟೀಲ್ ಮದುವೆ ದಿನವೇ ನಾಪತ್ತೆಯಾದ ವರ. ಇಂದು ಪಟ್ಟಣದ ಸಾಯಿ ಕಾರ್ಯಾಲಯದಲ್ಲಿ ಮಹಾರಾಷ್ಟ್ರದ ಯುವತಿ ಜೊತೆ ಸುನಿಲ್ ಮದುವೆ ನಿಶ್ಚಯವಾಗಿತ್ತು. ಬುಧವಾರ ಸಂಜೆಯವರೆಗೂ ಕುಟುಂಬಸ್ಥರ ಜೊತೆಗಿದ್ದ ಸುನಿಲ್ ಇಂದು ಬೆಳಗ್ಗೆಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಬೆಳಗ್ಗೆ ಅರಿಶಿನ ಕಾರ್ಯಕ್ಕೆ ಕುಟುಂಬಸ್ಥರು ವರನನ್ನು ಹುಡುಕುತ್ತಿದ್ದಾಗ ಸುನಿಲ್ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಇಂದು ಮಧ್ಯಾಹ್ನ 12.30ಕ್ಕೆ ಮುಹೂರ್ತ ಸಹ ನಿಗದಿಯಾಗಿತ್ತು. ನಾಪತ್ತೆಯಾಗಿರುವ ಸುನಿಲ್ ಕನ್ನಡ ಪರ ಸಂಘಟನೆಯೊಂದರ ತಾಲೂಕು ಅಧ್ಯಕ್ಷನಾಗಿದ್ದಾನೆ. ಇತ್ತ ವರ ನಾಪತ್ತೆಯಾದ ಸುದ್ದಿ ತಿಳಿಯುತ್ತಲೇ ವಧುವಿನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
Comments are closed.