ಚಿಕ್ಕಬಳ್ಳಾಪುರ: ನನ್ನ ಜೊತೆಗೆ ಸಾಕಷ್ಟು ಮಂದಿ ಸಂಪರ್ಕದಲ್ಲಿ ಇದ್ದು, ಡಿಸೆಂಬರ್ 9ರ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದೆಯೆಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ನಂದಿ ಅಂಜನಪ್ಪ ಪರ ಮತಯಾಚನೆ ಮಾಡಿ ಮಾತನಾಡಿದರು. ರಾಜ್ಯದ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಅನರ್ಹರನ್ನು ನಾವು ಸೋಲಿಸಬೇಕಿಲ್ಲ, ಬಿಜೆಪಿ ಹಾಗೂ ಆರ್ ಎಸ್ಎಸ್ ನಾಯಕರೇ ಟೊಂಕ ಕಟ್ಟಿ ನಿಂತಿದ್ದಾರೆ. ಹಫ್ತ ವಸೂಲಿಗೆ ಮತ್ತೊಂದು ಹೆಸರೇ ಸುಧಾಕರ್ . ಸುಧಾಕರ್ ಗೆದ್ದರೆ ಯಡಿಯೂರಪ್ಪರನ್ನು ಮಾರಾಟ ಮಾಡುತ್ತಾರೆ ಎಂದರು.
ಮೆಡಿಕಲ್ ಕಾಲೇಜಿಗೆ ಹೋರಾಡುವೆ
ಉಪ ಚುನಾವಣೆ ಮುಗಿಯಲಿ ಮೆಡಿಕಲ್ ಕಾಲೇಜು ಹೋರಾಟ ಮುಂದುವರಿಸುವೆ. ಅದಕ್ಕೂ ಮೊದಲು ಸಿಎಂಗೆ ಪತ್ರ ಬರೆಯುವುದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದರು.
Comments are closed.