
ಬೆಂಗಳೂರು: ರಾಜ್ಯದಲ್ಲಿ ಬಂಧನಕ್ಕೊಳಗಾದ ಅಕ್ರಮ ವಲಸಿಗರು ಹಾಗೂ ವಿದೇಶಿ ಪ್ರಜೆಗಳು ಜೈಲಿನಿಂದ ಬಿಡುಗಡೆಗೊಂಡ ಬಳಿಕ ಅವರನ್ನು ಇರಿಸಲು ರಾಜ್ಯಾದ್ಯಂತ 35 ತಾತ್ಕಾಲಿಕವಾದ “ವಿದೇಶೀಯರ ಬಂಧನ ಕೇಂದ್ರ’ (ಫಾರಿನರ್ ಡಿಟೆನ್ಶನ್ ಸೆಂಟರ್)ಗಳನ್ನು ಆರಂಭಿಸಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಹೇಳಿದೆ.
ನಗರದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಬಾಂಗ್ಲಾ ದೇಶ ನಿವಾಸಿಗಳು ಎನ್ನಲಾದ ಬಾಬುಲ್ ಖಾನ್ ಮತ್ತು ತಾನಿಯಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯ ಪೀಠಕ್ಕೆ ಈ ಮಾಹಿತಿ ನೀಡಲಾಗಿದೆ.
ತಾತ್ಕಾಲಿಕ ಬಂಧನ ಕೇಂದ್ರಗಳ ಸ್ಥಾಪನೆಗೆ ಈಗಾಗಲೇ ರಾಜ್ಯದ 35 ಕಡೆ ಜಾಗ ಹಾಗೂ ಕಟ್ಟಡಗಳನ್ನು ಗುರುತಿಸ ಲಾಗಿದೆ. ಇನ್ನುಳಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿ ಸೊಂಡೆಕೊಪ್ಪದಲ್ಲಿ 200 ಜನರ ಸಾಮರ್ಥ್ಯದ ಶಾಶ್ವತವಾದ ತಾತ್ಕಾಲಿಕ ಬಂಧನ ಕೇಂದ್ರ ಸ್ಥಾಪಿಸಲಾಗಿದೆ. ಸರ್ಜಾಪುರದಲ್ಲಿ 15 ಮಂದಿಯನ್ನು ಇರಿಸಲು ಅವಕಾಶ ವಿರುವ ತಾತ್ಕಾಲಿಕ ಬಂಧನ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
Comments are closed.