ಅಮರಾವತಿ : ಆಂಧ್ರದಲ್ಲಿ ಬಾರ್‌ಗಳ ಸಂಖ್ಯೆ ಕಡಿಮೆ ಮಾಡುವುದಾಗಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇಂದು ರಾಜ್ಯದ ಎಲ್ಲಾ ಬಾರ್‌ಗಳ ಪರವಾನಿಗೆಯನ್ನು ರದ್ದುಗೊಳಿಸಿದ್ದಾರೆ. ಇದರ ಜೊತೆಯಲ್ಲೇ ಹೊಸ ಬಾರ್ ನೀತಿಯನ್ನು ಪ್ರಕಟಿಸಿರುವ ಅವರು, ಮುಂದಿನ ಎರಡು ವರ್ಷದಲ್ಲಿ ಇದನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.
ಆಂಧ್ರದಲ್ಲಿ ಸದ್ಯಕ್ಕೆ ರಾಜ್ಯ ಪಾನೀಯ ನಿಗಮದಿಂದ ನಿರ್ವಹಣೆಯಾಗುತ್ತಿರುವ ಮದ್ಯ ಮಾರಾಟ ಮಳಿಗೆಗಳ ಸಂಖ್ಯೆ 3,500 ಇದೆ. ಈ ಎಲ್ಲಾ ಬಾರ್‌ಗಳ ಲೈಸೆನ್ಸನ್ನು ರದ್ದುಗೊಳಿಸಲಾಗಿದೆ. ಈ ಕ್ರಮವು ತತ್ಕ್ಷಣದಿಂದಲೇ ಜಾರಿಗೆ ಬರಲಿದೆ.
ಸರ್ಕಾರದ ಹೊಸ ಬಾರ್ ನೀತಿಯಂತೆ ಮುಂದಿನ ದಿನಗಳಲ್ಲಿ 479 ಬಾರ್ಗಳಿಗೆ ಮಾತ್ರ ಲೈಸೆನ್ಸ್ ನೀಡಲಾಗುತ್ತದೆ. ಮುಂದಿನ ತಿಂಗಳು ಲಾಟರಿ ಮೂಲಕ ಬಾರ್ಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಯೋಜಿಸಲಾಗಿದೆ. ಹೊಸ ಬಾರ್ ಲೈಸೆನ್ಸ್ಗೆ 10 ಲಕ್ಷ ರೂ ನಿಗದಿ ಮಾಡಲಾಗಿದೆ. ಹಾಗೆಯೇ, ಥ್ರೀ-ಸ್ಟಾರ್ ಹೋಟೆಲ್ಗಳು ಮತ್ತು ಮೈಕ್ರೋ ಬೆವರೇಜ್ಗಳು ಮದ್ಯ ಮಾರಾಟಕ್ಕೆ ಪರವಾನಿಗೆ ಪಡೆಯಲು 1.5 ಕೋಟಿ ರೂ ತೆರಬೇಕಾಗುತ್ತದೆ.
ಮೇಲೆ ತಿಳಿಸಿದಂತೆ 479 ಬಾರ್ಗಳಿಗೆ ಲೈಸೆನ್ಸ್ ನೀಡಲಾಗುತ್ತೆ. 38 ಥ್ರೀ-ಸ್ಟಾರ್ ಹೋಟೆಲ್ಗಳು ಹಾಗೂ ನಾಲ್ಕು ಮೈಕ್ರೋ ಬೆವೆರೇಜ್ ಮಳಿಗೆಗಳಲ್ಲಿ ಆಲ್ಕೋಹಾಲ್ ಲಭ್ಯವಿರಲಿದೆ. ಹೊಸ ಬಾರ್ ನೀತಿಯಂತೆ ಜನವರಿ 1ರಿಂದ ರಾಜ್ಯದಲ್ಲಿ ಬಾರ್ಗಳು ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ಮಾತ್ರ ಕಾರ್ಯನಿರ್ವಹಿಸುವಂತೆ ನಿರ್ಬಂಧಿಸಲಾಗಿದೆ.

Comments are closed.