ಕರ್ನಾಟಕ

ಆರ್‌ ಅಶೋಕ್‌ ವಿರುದ್ಧ ಪೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಆರೋಪಿ ಬಂಧನ

Pinterest LinkedIn Tumblr


ಬೆಂಗಳೂರು: ಅನರ್ಹ ಶಾಸಕ ಮುನಿರತ್ನ ಹಾಗೂ ಕಂದಾಯ ಸಚಿವ ಆರ್‌ ಅಶೋಕ್‌ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಸೈಬರ್‌ ಠಾಣೆ ಪೊಲೀಸರು ಚಂದನ್‌ ಎನ್ನುವ ಯುವಕನನ್ನು ಬಂಧಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಮತ್ತು ಕಾನೂನು ವಿದ್ಯಾರ್ಥಿ ಎಂದು ಪರಿಚಯ ಮಾಡಿಕೊಂಡಿರುವ ಚಂದನ್‌ ಕಳೆದ ಆಗಸ್ಟ್‌ 28 ಮತ್ತು 29 ರಂದು ಫೇಸ್‌ಬುಕ್‌ನಲ್ಲಿ ಇಬ್ಬರ ವಿರುದ್ಧವೂ ಪೋಸ್ಟ್‌ ಹಾಕಿದ್ದ ಬಗ್ಗೆ ಸೈಬರ್‌ ಠಾಣೆಯಲ್ಲಿದೂರು ದಾಖಲಾಗಿತ್ತು.

ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಧನಂಜಯ್‌ ಎನ್ನುವವರು ಈ ಬಗ್ಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸೈಬರ್‌ ಠಾಣೆ ಪೊಲೀಸರು ಆರೋಪಿ ಚಂದನ್‌ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆರ್‌ಎಸ್‌ಎಸ್‌ ಕಾರ್ಯಕರ್ತ ಮತ್ತು ಕರ್ನಾಟಕದ ಸ್ವಯಂ ಸೇವಕ್‌ ಎಂದು ಹೇಳಿಕೊಂಡಿರುವ ಚಂದನ್‌ ತನ್ನ ಪೋಸ್ಟ್‌ನಲ್ಲಿ’ಕೇಸರಿ ನೋಡಿ ಅಶೋಕ ಸಾಮ್ರಾಟನಿಗೆ ಧರ್ಮವೇ ಜೀವನ ಎಂದುಕೊಂಡಿದ್ದೆ. ಈ ನಡುವೆ ‘ಮೊನಿ’ರತ್ನವೇ ಜೀವನ ಆಗಿದೆ’ ಎಂದು ಬರೆದಿದ್ದ. ಸಾಮಾಜಿಕ ತಾಣವನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕವಾಗಿ ಅವಹೇಳನ ಮಾಡಿದ ಆರೋಪದ ಮೇಲೆ ಚಂದನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.