ಕರ್ನಾಟಕ

ಪ್ಲೇ ಸ್ಟೋರ್‌ ಪತ್ತೆಯಾದ ಕೆಲವು ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಗಳು

Pinterest LinkedIn Tumblr

ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳು ಕಾಮನ್. ಅದ್ರಲ್ಲೂ ಮನರಂಜನೆ, ಗೇಮ್ಸ್ ಮತ್ತು ಫನ್ ವಿಡಿಯೋ ಆಪ್ ಗಳು ಇಲ್ಲದೆ ಇರುವ ಮೊಬೈಲ್ ಗಳಿಲ್ಲ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇಂತಹ ಹಲವು ಅಪ್ಲಿಕೇಶನ್‌ಗಳನ್ನ ಡೌನ್ಲೋಡ್ ಮಾಡಿಕೊಂಡಿರ್ತೀರ.

ಆದ್ರೆ ಅದು ನಿಮ್ಮ ಮೊಬೈಲ್ ಗೆ ಎಷ್ಟು ಹಾನಿಕಾರಕ ಅನ್ನೋದು ಗೊತ್ತಿರುವುದಿಲ್ಲ. ಪ್ಲೇ ಸ್ಟೋರ್ ನ ಕೆಲವು ಆಪ್ ಗಳಲ್ಲಿ ಮಾಲ್ವೇರ್, ಸ್ಪೈವೇರ್ನಂತಹ ಅಪಾಯಕಾರಿ ವೈರಸ್ ಗಳು ಇರೋದು ತಿಳಿದು ಬಂದಿವೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಫೋನ್ ಗಳಿಗೆ ಅಪಾಯಕಾರಿಯಾದ ಅಪ್ಲಿಕೇಶನ್‌ಗಳನ್ನು ಗುರುತಿಸಲಾಗಿದೆ. ಆಂಟಿವೈರಸ್ ಸಾಫ್ಟ್‌ವೇರ್ ಪೂರೈಕೆದಾರ ಡಾ| ವೆಬ್ ವರದಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನ ಕೆಲವು ಅಪ್ಲಿಕೇಶನ್‌ಗಳಲ್ಲಿ ದುರುದ್ದೇಶಪೂರಿತ ಕೋಡ್ (malicious code) ಇರುವುದು ಕಂಡುಬಂದಿದೆ.

ಈ ಅಪ್ಲಿಕೇಶನ್‌ಗಳು ಒಳ್ಳೆಯ ಸರ್ವಿಸ್ ಕೊಡುತ್ತಿವೆ ಅನಿಸುತ್ತೆ. ಆದ್ರೆ ಅವು ನಿಜವಾಗಿಯೂ ಮಾಲ್ವೇರ್ಗಳಿರುವ ಆಪ್‌ ಗಳಾಗಿವೆ. ಫೋಟೋ ಎಡಿಟಿಂಗ್ ಸಾಫ್ಟ್‌ವೇರ್, ಗೇಮ್ಸ್ ಮತ್ತು ಫೋಟೋ ಗ್ಯಾಲರಿಯಂತಹ ಆಪ್‌ ಗಳೂ ಇದ್ರಲ್ಲಿ ಸೇರಿವೆ.

ಈ ಕೆಲವು ಅಪ್ಲಿಕೇಶನ್‌ಗಳಲ್ಲಿ ಬ್ಯಾಂಕಿಂಗ್ ಟ್ರೋಜನ್‌ಗಳು ಇವೆ ಎಂದು ವರದಿ ಹೇಳುತ್ತದೆ. ಪ್ಲೇ ಸ್ಟೋರ್ ‘ಯೋಬಿಟ್ ಟ್ರೇಡಿಂಗ್’ ಎಂಬ ಅಪ್ಲಿಕೇಶನ್‌ಗಳಿವೆ. ಅದು ತಮ್ಮನ್ನು ಕ್ರಿಪ್ಟೋ ವಿನಿಮಯದ ಅಧಿಕೃತ ಅಪ್ಲಿಕೇಶನ್ ಎಂದು ವಿವರಿಸುತ್ತದೆ. ಆದರೆ ಬಳಕೆದಾರರು ಅದನ್ನು ಡೌನ್‌ಲೋಡ್ ಮಾಡಿದಾಗ, ಅದು ಮೊಬೈಲ್ನಲ್ಲಿನ ಎಲ್ಲಾ ವೈಯಕ್ತಿಕ ಹಾಗೂ ಬ್ಯಾಂಕಿಂಗ್ ಸಂಬಂಧಪಟ್ಟ ಮಾಹಿತಿಯನ್ನು ಕದಿಯುತ್ತದೆ.

ಅಪಾಯಕಾರಿ ಅಪ್ಲಿಕೇಶನ್‌ಗಳ ಈ ಪಟ್ಟಿಯಲ್ಲಿ ಮೋಟರ್‌ರೋಡ್ 2 ಡಿ, ಸೆಲ್ ಕ್ಯಾಮೆರಾ, ಪ್ಲೆಡ್ಜ್ ಕ್ಲೀನ್, ಮೆಂಟರ್ ಸೆಕ್ಯುರಿಟಿ, ಕಂಪೋಸ್ ಕ್ಯಾಮೆರಾ, ಡಿಸ್ಪ್ಲೇ ವಾಲ್‌ಪೇಪರ್, ಗ್ರೀನ್ ಕ್ಯಾಮೆರಾ ಅಪ್ಲಿಕೇಶನ್ ಸೇರಿವೆ. ಸೆಪ್ಟೆಂಬರ್‌ನಲ್ಲಿ 172 ಅಪ್ಲಿಕೇಶನ್‌ಗಳಲ್ಲಿ ವೈರಸ್ ಪತ್ತೆಯಾಗಿದೆ. ಮಾಹಿತಿಯ ಪ್ರಕಾರ ಈ ಅಪ್ಲಿಕೇಶನ್‌ಗಳನ್ನು 33.5 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ.

Comments are closed.