ಕರ್ನಾಟಕ

ಕಾರಾಗೃಹದ ಸಿಬ್ಬಂದಿಯ ಕೈ ಚಳಕ- ಪರಪ್ಪನ ಅಗ್ರಹಾರ ಕೈದಿಗಳ ಐಷಾರಾಮಿ ಜೀವನದ ಗುಹೆ

Pinterest LinkedIn Tumblr

ಬೆಂಗಳೂರು: ಕೆಲ ಪ್ರಭಾವಿ ಕೈದಿಗಳಿಗೆ ಪರಪ್ಪನ ಅಗ್ರಹಾರ ಕಾರಾಗೃಹ ಜೈಲಾಗಿಲ್ಲ.ಐಷಾರಾಮಿ ಜೀವನ ನಡೆಸುವ ಮತ್ತೊಂದು ಗುಹೆಯಾಗಿದೆ. ಇಲ್ಲಿದ್ದುಕೊಂಡೆ ಹೊರಗಿನ ತಮ್ಮ ವ್ಯವಹಾರಗಳನ್ನು ಸುಲಭವಾಗಿ ನಡೆಸುತ್ತಾರೆ. ಪೊಲೀಸರು ಆಗಾಗ್ಗೆ ದಾಳಿ ಮಾಡಿದ್ದರೂ ಪರಿಸ್ಥಿತಿಯಲ್ಲಿ ಬದಲಾವಣೆ ಆಗಿಲ್ಲ.

ಏಳು ಸುತ್ತಿನ ಕೋಟೆಯಂತಿರುವ ಕಾರಾಗೃಹದೊಳಗೆ ಮೊಬೈಲ್ ಪೋನ್ ಗಳು, ಗಾಂಜಾ, ಬೀರ್, ವಿಸ್ಕಿ, ಸಿಮ್ ಕಾರ್ಡ್, ಚಾಕುಗಳು ಸುಲಭವಾಗಿ ಸರಬರಾಜು ಆಗುತ್ತಿವೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಕಾರಾಗೃಹದ ಸಿಬ್ಬಂದಿಯ ಕೈ ಚಳಕದೊಂದಿಗೆ ಬಹುತೇಕ ಐಷಾರಾಮಿ ವಸ್ತುಗಳು ಪೂರೈಕೆ ಆಗುತ್ತಿವೆ. ನಮ್ಮ ಅರಿವಿಗೆ ಬಾರದೆ ಏನೂ ನಡೆಯುವುದಿಲ್ಲ ಎನ್ನುತ್ತಾರೆ ನಿವೃತ್ತ ಜೈಲಿನ ಅಧಿಕಾರಿ.

ತರಕಾರಿ ಹಾಗೂ ಮಾಂಸ ತರುವ ವಾಹನಗಳ ಮೂಲಕ ಮೊಬೈಲ್ ಪೋನ್ ಗಳನ್ನು ಆಗಾಗ್ಗೆ ತರಿಸಿಕೊಳ್ಳಲಾಗುತಿತ್ತು. ಬೆಂಗಾವಲು ವಾಹನದೊಂದಿಗೆ ನ್ಯಾಯಾಲಯಕ್ಕೆ ಹೋಗುವಾಗಲೂ ಇಂತಹ ಕೆಲಸ ಮಾಡಲಾಗುತಿತ್ತು ಎಂದು ಮಾಜಿ ಅಪರಾಧಿಯೊಬ್ಬರು  ಹೇಳುತ್ತಾರೆ.

ಬೆಂಗಾವಲು ಕರ್ತವ್ಯಕ್ಕೆ ಬರುವ ಸಿಬ್ಬಂದಿಯೊಂದಿಗೆ ಆಗ್ಗಾಗೆ ನ್ಯಾಯಾಲಯಕ್ಕೆ ಹೋಗುವ ಕೈದಿಗಳ ನಡುವೆ ಪರಸ್ಪರ ಅರಿವಿರುತ್ತದೆ. ಗೇಟ್ ಹತ್ತಿರ ಇರುವ ಸಿಬ್ಬಂದಿಯಿಂದ ಅಪರಾಧಿಗೆ ಮೊಬೈಲ್ ಪೋನ್ ನೀಡಲಾಗುತಿತ್ತು. ಅವರು ಬಾಸ್ ಗೆ ಅದನ್ನು ವರ್ಗಾಯಿಸು ತ್ತಿದ್ದರು ಎಂದು ಕಾರಾಗೃಹದಲ್ಲಿನ ಸ್ಥಿತಿಗತಿಯನ್ನು ಮಾಜಿ ಕೈದಿಯೊಬ್ಬರು ಬಿಚ್ಚಿಟ್ಟಿದ್ದಾರೆ.

ಕೋಡ್ ಕಾರ್ಡ್ : ಕುತೂಹಲದ ಸಂಗತಿ ಎಂದರೆ ಕೋರ್ಡ್ ಕಾರ್ಡ್ ಮೂಲಕ ಪ್ರತಿಯೊಂದು ವ್ಯವಹಾರ ನಡೆಯುತ್ತದೆ. ಮಾಲ್ ನೊಂದಿಗೆ ಸಿಬ್ಬಂದಿ ಕಾರಾಗೃಹದೊಳಗೆ ಪ್ರವೇಶಿಸಿದಾಗ ಆಗಾಗ್ಗೆ ಅನೇಕ ಸಿಗ್ನಲ್ ಗಳನ್ನು ನೀಡಲಾಗುತ್ತದೆ. ಪ್ರತಿ ಹಂತದಲ್ಲೂ ಅದಕ್ಕಾಗಿಯೇ ಅವರ ಜನರನ್ನು ನಿಯೋಜಿಸಲಾಗುತ್ತದೆ. ಒಂದು ಬಾರಿ ಕೆಲಸ ಮುಗಿಸಿದ ನಂತರ ಆತನಿಗೆ ಎಲ್ಲಾ ಇಲಾಖೆಯ ಬಾಸ್ ಗಳಿಂದ ಹಣವನ್ನು ನೀಡಲಾಗುತ್ತದೆ ಎಂದು ಮತ್ತೊಬ್ಬ ಅಪರಾಧಿ ತಿಳಿಸಿದ್ದಾರೆ.

ಮೊಬೈಲ್ ಪೋನ್ ಗೆ ‘ಬಾಕ್ಸ್ ‘ ಮದ್ಯಕ್ಕೆ ‘ನೀರು’ ಅಥವಾ ನೀರು, ಚಾಕುವಿಗೆ ‘ ಈರುಳ್ಳಿ, ಗಾಂಜಾಕ್ಕೆ ‘ ಹೊಗೆ ಎಂದು ಕೋಡ್ ಕಾರ್ಡ್ ನೀಡಲಾಗುತ್ತದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಇತ್ತೀಚಿಗೆ ಮೊಬೈಲ್ ಪೋನ್, ಗಾಂಜಾ ಬಳಕೆ ವಿಪರೀತವಾಗುತ್ತಿದ್ದರಿಂದ ತರಕಾರಿ, ಮಾಂಸ ತರುವ ವಾಹನಗಳನ್ನು ಜೈಲಿನ ಆವರಣದೊಳಗೆ ನಿಷೇಧಿಸಲಾಗಿದೆ. ಜೈಲಿನ ಪ್ರವೇಶ ದ್ವಾರದಲ್ಲಿಯೇ ಆ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಸಣ್ಣ ಟ್ರಾಲಿಗಳನ್ನು ಸಾಮಾಗ್ರಿಗಳನ್ನು ಸಾಗಿಸಲು ಬಳಸಲಾಗುತ್ತಿದೆ. ಆದಾಗ್ಯೂ, ದಾಳಿ ನಡೆಸಿದಾಗ ಕಾರಾಗೃಹದಲ್ಲಿ ಇರುತ್ತಿದ್ದ ಬಾಸ್ ಗಳು ಹೆಚ್ಚಿನ ಹಣ ಸಂಪಾದಿಸುತ್ತಿದ್ದರು ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.

ತಮ್ಮ ಮಾಲ್ ಸುರಕ್ಷಿತವಾಗಿ ಬಂದರೆ ಸಾಕು ಎಂಬುದೇ ಕೆಲ ನಿಯೋಜಿತ ಅಧಿಕಾರಿಗಳ ಕೆಲಸವಾಗಿರುತ್ತದೆ. ಕೆಲವೊಂದು ವೇಳೆ ಲಕ್ಷಗಟ್ಟಲೇ ವ್ಯವಹಾರ ನಡೆಯುತ್ತದೆ. ಖೈದಿಗಳ ಬಳಿಯಲ್ಲಿ 2 ರಿಂದ ಮೂರು ಲಕ್ಷ ರೂಪಾಯಿ ಇರುವುದನ್ನು ಕೆಲ ಅಧಿಕಾರಿಗಳು ಗುರುತಿಸುತ್ತಿದ್ದರು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.

ಲೈಬ್ರರಿ, ಅಡುಗೆ ಮನೆ, ಸೋಪ್ ಪ್ಯಾಕ್ಟರಿ ಮತ್ತಿತರ ಕಡೆಗಳಲ್ಲಿ ಸಾಮಾನ್ಯವಾಗಿ ಹಣವನ್ನು ಇಡಲಾಗುತ್ತದೆ. ಸೊಕಾಲ್ಡ್ ರೈಡ್ ಆದ ನಂತರ ಸಿಗರೇಟ್ ಬೆಲೆಯನ್ನು 25 ರಿಂದ 200, 300 ರೂ ಹೆಚ್ಚಿಸಲಾಗುತ್ತದೆ. ಒಂದು ಬೀಡಿ ಬೆಲೆ 100 ರೂ. ಆಗುತ್ತದೆ. ಕೇರಳದಿಂದ ಗಾಂಜಾವನ್ನು ತರಿಸಿಕೊಳ್ಳಲಾಗುತ್ತದೆ. ಅಪಾರ ಪ್ರಮಾಣದ ಹಣ ವಹಿವಾಟು ನಡೆಸಲಾಗುತ್ತದೆ. ಕೆಲ ಜನರು ಸಾವಿರ ರೂಪಾಯಿಗೆ ವಾರಕ್ಕೆ 200 ರೂ ನಂತೆ ಬಡ್ಡಿ ನೀಡುತ್ತಾರೆ ಎಂದು ಮಾಜಿ ಕೈದಿಯೊಬ್ಬರು ಮಾಹಿತಿ ನೀಡಿದ್ದಾರೆ.

Comments are closed.