ಕರ್ನಾಟಕ

ಮೈಸೂರು ದಸರಾದ ಮೂರನೇ ದಿನದ ಅದ್ಧೂರಿ ರಂಗು!

Pinterest LinkedIn Tumblr


ಮೂರನೇ ದಿನವಾದ ಇಂದೂ ಕೂಡಾ ವಿಶ್ವವಿಖ್ಯಾತ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ನಗರದ ಕೋಟೆ ಆಂಜನೇಯಸ್ವಾಮಿ ‌ದೇವಸ್ಥಾನ‌ದ ಮುಂಭಾಗ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ, ನಗಾರಿ ಬಾರಿಸುವ ಮೂಲಕ ರೈತ ದಸರಾವನ್ನು ಉದ್ಘಾಟಿಸಿದರು.

ಬಳಿಕ ಪೂಜ ಕುಣಿತ, ವೀರಗಾಸೆ, ಹುಲಿ ಕುಣಿತ ಹೀಗೆ ಹಲವಾರು ಕಲಾ ತಂಡಗಳು, ಸ್ತಬ್ಧಚಿತ್ರಗಳು, ಬಂಡೂರಿ ಕುರಿಗಳು ಹಾಗೂ ಏಳು ಎತ್ತಿನ‌ ಗಾಡಿಗಳ ಮೂಲ‌ಕ‌ ರೈತರು ಜೆ.ಕೆ. ಮೈದಾನದವರೆಗೆ ರೈತ ದಸರಾ ಮೆರವಣಿಗೆ ನಡೆಯಿತು.

ಯೋಗ ದಸರಾ ಉಪಸಮಿತಿ ಆಶ್ರಯದಲ್ಲಿ ಕುವೆಂಪು ನಗರದ ಸೌಗಂದಿಕಾ ಉದ್ಯಾನವನದಲ್ಲಿ ಶಾಸಕ ಎಸ್.ಎ. ರಾಮದಾಸ್ ಯೋಗ ವಾಹಿನಿಗೆ ಚಾಲನೆ ನೀಡಿದರು. ಯೋಗಪಟುಗಳು, ಯೋಗಾಸಕ್ತರು ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದರು.

ತಾಲೂಕುಗಳ ಸಂಚಾರ ಮುಗಿಸಿ ಬಂದ ಕ್ರೀಡಾ ಜ್ಯೋತಿಗೆ ಅರಮನೆ ಮುಂಭಾಗದಲ್ಲಿ ಕ್ರೀಡಾ ಉಪ ಸಮಿತಿ ಅಧ್ಯಕ್ಷ ಡಾ.ವರ್ಷಾ ಚಾಲನೆ ನೀಡಿದರು. ಸಂಜೆ ಪಿ.ವಿ. ಸಿಂಧು ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಇನ್ನು ದಸರಾ ಉತ್ಸವದಲ್ಲಿ ಕನ್ನಡದ ಸ್ವೀಟ್​ ಸಿಂಗರ್​ ಅರ್ಚನಾ ಉಡಪರ ಹಾಡುಗಳು ಜನರನ್ನ ರೋಮಾಂಚನಗೊಳಿಸಲಿದ್ದಾರೆ.

Comments are closed.