ಕರ್ನಾಟಕ

ರೋಹಿಣಿ ಸಿಂಧೂರಿ ವರ್ಗಾವಣೆಗೆ ಅಸಲಿ ಕಾರಣ ಏನ್ ಗೊತ್ತಾ?

Pinterest LinkedIn Tumblr


ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುವ ಮೂಲಕ ಸದಾ ಸುದ್ದಿಗೆ ಗ್ರಾಸವಾಗುತ್ತಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ರಾಜ್ಯದ ಪ್ರಾಮಾಣಿಕ ಅಧಿಕಾರಿಗಳಲ್ಲೊಬ್ಬರು ಎಂದೇ ಗುರುತಿಸಲಾಗುತ್ತಿತ್ತು. ಪದೇ ಪದೇ ವರ್ಗಾವಣೆಗೆ ಒಳಗಾಗುತ್ತಿದ್ದ ಅವರನ್ನು ಇತ್ತೀಚೆಗೆ ಕಾರ್ಮಿಕ ಇಲಾಖೆಯಿಂದಲೂ ಎತ್ತಂಗಡಿ ಮಾಡಲಾಗಿತ್ತು. ಆದರೆ, ಅವರ ವರ್ಗಾವಣೆಗೆ ಕಾರಣ ಏನು? ಎಂಬುದು ಮಾತ್ರ ಈವರೆಗೆ ಬಯಲಾಗಿರಲಿಲ್ಲ. ಆದರೆ. ಇದೀಗ ಅವರ ವರ್ಗಾವಣೆಯ ಕುರಿತ ನಿಜವಾದ ಕಾರಣ ನ್ಯೂಸ್​18ಗೆ ಲಭ್ಯವಾಗಿದೆ.

ಈ ಹಿಂದೆ ಹಾಸನದ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಪಕ್ಷಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಿದ ಆರೋಪ ಇತ್ತು. ಹೀಗಾಗಿ ಅವರನ್ನು ಜಿಲ್ಲಾಧಿಕಾರಿ ಸ್ಥಾನದಿಂದ ಕಾರ್ಮಿಕ ಕಲ್ಯಾಣ ಇಲಾಖೆಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರು ಅಲ್ಲೂ ಕಿರಿಕ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ.

ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಲ್ಲಿನ ಕಾರ್ಮಿಕರ ಹಾಗೂ ಬಡವರ ಪರ ಕೆಲಸ ಮಾಡಬೇಕಿತ್ತು. ಆದರೆ, ಬಡವರ ಪರ ಕೆಲಸ ಮಾಡದ ಸಿಂಧೂರಿ, ಉಳ್ಳವರ ಪರ ಲಾಭಿ ಮಾಡುತ್ತಾ ಅವರಿಗಾಗಿ ಕೆಲಸ ಮಾಡಿದ ಆರೋಪವನ್ನು ತನ್ನ ಮೇಲೆ ಹೊರಿಸಿಕೊಂಡಿದ್ದಾರೆ.

ಬಡ ಕಾರ್ಮಿಕರು ಕಚೇರಿಗೆ ಬಂದು ಕೆಲಸ ಹೇಳಿ ಬೇಡಿದರೂ ಆ ಕುರಿತು ಅಧಿಕಾರಿ ರೋಹಿಣಿ ಸಿಂಧೂರಿ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದರಿಂದ ರೊಚ್ಚಿಗೆದ್ದಿರುವ ಕಾರ್ಮಿಕರು ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಪದೇ ಪದೇ ರೋಹಿಣಿ ಸಿಂಧೂರಿ ವಿರುದ್ಧ ಕಾರ್ಮಿಕರಿಂದ ದೂರು ದಾಖಲಾದ ಪರಿಣಾಮ ರಾಜ್ಯ ಸರ್ಕಾರ ರೋಹಿಣಿ ಅವರನ್ನು ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಐಎಎಸ್​ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣದಲ್ಲೂ ರೋಹಿಣಿ ಸಿಂಧೂರಿ ಹೆಸರು ಕೇಳಿಬಂದಿತ್ತು.

Comments are closed.