ಕರ್ನಾಟಕ

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಆರೋಪಿ ಮನ್ಸೂರ್​ ಖಾನ್ ಸೆ.24ರವರೆಗೆ ಸಿಬಿಐ ವಶಕ್ಕೆ

Pinterest LinkedIn Tumblr

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮನ್ಸೂರ್​ ಖಾನ್​ ಮತ್ತೆ ಸಿಬಿಐ ವಶವಾಗಿದ್ದಾರೆ. ಸೆಪ್ಟೆಂಬರ್​ 24ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಪ್ರಮುಖ ಆರೋಪಿ ಮನ್ಸೂರ್​ ಖಾನ್ ಹಾಗೂ ಮತ್ತೊಬ್ಬ ಆರೋಪಿ ನವೀದ್​ ಎಂಬಾತನನ್ನು ನ್ಯಾಯಾಲಯ ಸಿಬಿಐ ವಶಕ್ಕೆ ನೀಡಿದೆ. ಇನ್ನುಳಿದ ನಿಜಾಮುದ್ದೀನ್​ ಮತ್ತು ನಾಸೀರ್​ ಹುಸೇನ್​ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ ಎಂದು ಕೋರ್ಟ್​ ಆದೇಶ ನೀಡಿದೆ.

ಆರೋಪಿಗಳ ಮತ್ತಷ್ಟು ವಿಚಾರಣೆ ಅಗತ್ಯವಿದೆ. ವಂಚನೆ ಮತ್ತು ಹಣ ನೀಡಿರುವ ಬಗ್ಗೆ ಹಲವು ಮಹತ್ವದ ದಾಖಲೆಗಳನ್ನು ಕಲೆ ಹಾಕಬೇಕಿದೆ. ಆದ್ದರಿಂದ ಹೆಚ್ಚಿನ ವಿಚಾರಣೆಗೆ ಸಲುವಾಗಿ ಸಿಬಿಐ ವಶಕ್ಕೆ ನೀಡಬೇಕೆಂದು ಸಿಬಿಐ ಪರ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.

ಸಿಬಿಐ ಪರ ವಕೀಲರ ಮನವಿಯನ್ನು ಪುರಸ್ಕರಿಸಿದ ಕೋರ್ಟ್​ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್​ ಖಾನ್​​ ಮತ್ತು ಮತ್ತೊಬ್ಬ ಆರೋಪಿ ನವೀದ್ ಎಂಬಾತನನ್ನು ಸಿಬಿಐ ವಶಕ್ಕೆ ನೀಡಿದೆ. ಹೀಗಾಗಿ ಸೆಪ್ಟೆಂಬರ್ 24ರವರೆಗೆ ಇಬ್ಬರು ಆರೋಪಿಗಳು ಸಿಬಿಐ ವಶದಲ್ಲಿ ಇರಲಿದ್ದಾರೆ.

Comments are closed.