ಕರ್ನಾಟಕ

ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿ ವಿಜಯನಗರ ಜಿಲ್ಲೆ ರಚನೆಗೆ ಗಣಿ ರೆಡ್ಡಿಗಳ ವಿರೋಧ

Pinterest LinkedIn Tumblr

ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿ ವಿಜಯನಗರ ಜಿಲ್ಲೆಯನ್ನಾಗಿ ರಚಿಸುವ ಪ್ರಸ್ತಾವಕ್ಕೆ ಬಳ್ಳಾರಿ ಗಣಿಧಣಿಗಳು ರೆಡ್‌ ಸಿಗ್ನಲ್‌ ತೋರಿದ್ದಾರೆ.

ಈ ವಿಷಯವಾಗಿ ಬಿಜೆಪಿಯಲ್ಲಿ ಈಗ ಅಸಮಾಧಾನ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿರುದ್ಧ ಗಣಿಧಣಿಗಳು ಪರೋಕ್ಷವಾಗಿ ಮುನಿಸಿಕೊಂಡಿದ್ದಾರೆ.

ಬಳ್ಳಾರಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಬಳ್ಳಾರಿ ಜಿಲ್ಲೆ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ‌ಜಿಲ್ಲೆ ಇಬ್ಬಾಗ ಮಾಡಲು ಬಿಡಲ್ಲ. ಹೊಸಪೇಟೆ ‌ಜಿಲ್ಲೆ ಮಾಡಿದ್ರೇ‌ ಇದೊಂದು ತುಘಲಕ್ ದರ್ಬಾರ್ ಆಗುತ್ತದೆ. ಯಾರದ್ದೋ ಸ್ಚಾರ್ಥಕ್ಕೆ ವಿಜಯನಗರ ‌ಜಿಲ್ಲೆ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಖಂಡ ಬಳ್ಳಾರಿ ‌ಜಿಲ್ಲೆ ನಮ್ಮ ಆಗ್ರಹ. ಬಳ್ಳಾರಿ ಜಿಲ್ಲೆಗೆ ವಿಜಯನಗರವೆಂದು ನಾಮಕರಣ ಮಾಡಿ. ಬೆಳಗಾವಿಯಲ್ಲಿ 18 ತಾಲೂಕುಗಳಿವೆ. ಆನಂತಪುರ‌ ಜಿಲ್ಲೆ ಮುನ್ನೂರು ಕಿಮೀ ವಿಸ್ತೀರ್ಣ ಇದೆ- ಅವರಗಿಲ್ಲದ ತೊಂದರೆ ನಮಗೆ ಬಂದಿದೆಯಾ? ಎಂದು ಪ್ರಶ್ನಿಸಿದರು.

ಬೆಳಗಾವಿ ಯಾಕೆ ವಿಭಜನೆ ಮಾಡ್ತಿಲ್ಲ? ಬಳ್ಳಾರಿಯೇ ಕಣ್ಣಿಗೆ ಕಾಣುತ್ತಿದೇನಾ? ಜಿಲ್ಲೆಯ ಯಾವ ನಾಯಕರ ಅಭಿಪ್ರಾಯ ಪಡೆದಿಲ್ಲ. ತರಾತುರಿಯಲ್ಲಿ‌ ಘೋಷಣೆ ಮಾಡದಂತೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪಗೆ ಮನವಿ ಮಾಡಲಾಗುವುದು ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.

Comments are closed.