ಕರ್ನಾಟಕ

ಆಸ್ತಿ ವಿವಾದ, ರಾಜಕೀಯ ವೈಷಮ್ಯಕ್ಕೆ ತಂದೆ-ಮಗನ ಹತ್ಯೆ: ಬೆಚ್ಚಿಬಿದ್ದ ಗ್ರಾಮದ ಜನತೆ!

Pinterest LinkedIn Tumblr


ಹುಬ್ಬಳ್ಳಿ : ಅಪ್ಪನ ಜತೆಯಲ್ಲಿಯೆ ಬೆಳದು ನಿಂತಿದ್ದ ಮಗನನ್ನು ಹತ್ಯೆ ಮಾಡಿದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.

ಆಸ್ತಿ ವಿವಾದ, ರಾಜಕೀಯ ವೈಷಮ್ಯ ಹಾಗೂ ಗುಡಿಯ ಪೂಜಾರಿಕೆಯ ವಿಷಯವಾಗಿ ಎರಡು ಕುಟುಂಬದ ನಡುವೆ ಇದ್ದ ಹಳೆಯ ದ್ವೇಷಕ್ಕೆ ತಂದೆ-ಮಗನ ಕೊಲೆ ಜಗಳದಲ್ಲಿ ಅಂತ್ಯವಾಗಿದೆ.

ಹತ್ಯೆಯಾದ ತಂದೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಪಿಎಲ್ ಡಿ ಬ್ಯಾಂಕ್ ಸದಸ್ಯ ವೀರಭದ್ರಪ್ಪ ಸತ್ತೂರ ಹಾಗೂ ಅವರ ಮಗ ರವಿ ಸತ್ತೂರ ಎಂದು ತಿಳಿದು ಬಂದಿದೆ. ಒಂದೆಡೆ ಈ ಹತ್ಯೆಯಿಂದ ಜನ ಬೆಚ್ಚಿ ಬಿದ್ದಿದ್ದರೆ, ಇನ್ನೊಂದಡೆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಹತ್ಯೆಗಿಡಾದ ತಂದೆ ಹಾಗೂ ಮಗನ ಮೇಲೆ ಕಳೆದ ರಾತ್ರಿ , ಕಬ್ಬಿಣದ ರಾಡ್ ಸೇರಿದಂತೆ ಮಾರಕಾಸ್ತ್ರಗಳಿಂದ ಹೊಲದಲ್ಲಿ ಹಲ್ಲೆ ಮಾಡಲಾಗಿದೆ. ಸ್ಥಳದಲ್ಲಿಯೇ ತಂದೆ ವೀರಭದ್ರಪ್ಪ ಸತ್ತೂರು ಸಾವಿಗಿಡಾಗಿದ್ದಾನೆ. ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮೂರು ಜನರಲ್ಲಿ ಮಗ ರವಿ ಸತ್ತೂರು ಕೂಡ ಸಾವನ್ನಪ್ಪಿದ್ದಾನೆ. ಇನ್ನೀಬ್ಬರು ಗಾಯಾಳುಗಳ ಸ್ಥೀತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ತಂದೆ-ಮಗನ ಬರ್ಬರ ಹತ್ಯೆಗೆ ರಾಜಕೀಯ ವೈಷಮ್ಯ, ಆಸ್ತಿ ವಿವಾದ ಹಾಗೂ ಗ್ರಾಮದ ಬಸವಣ್ಣ ದೇವರ ಗುಡಿಯ ವಿಚಾರಕ್ಕೆ ಇದ್ದ ವೈಷಮ್ಯ ಕಾರಣ. ಬಸವರಾಜ್ ಶಿವಪ್ಪ ಅಕ್ಕಿ ಕುಟುಂಬ ಹಾಗೂ ಕೊಲೆಯಾಗಿರುವ ವೀರಭದ್ರಪ್ಪ ಸತ್ತೂರ ಕುಟುಂಬದ ನಡುವೆ ಕಳೆದ ಹಲವಾರು ವರ್ಷಗಳಿಂದ ಆಸ್ತಿ, ರಾಜಕೀಯ ಹಾಗೂ ಗುಡಿಯ ವಿಚಾರದಲ್ಲಿ ವೈಷಮ್ಯ ಬೆಳೆದಿತ್ತು. ಇದೆ ವಿಷಯವಾಗಿ ಕಳೆದ ರಾತ್ರಿ ವೀರಭದ್ರಪ್ಪ ಸತ್ತೂರ ಅವರ ಮನೆಗೆ ನುಗ್ಗಿದ್ದ ಅಕ್ಕಿ ಕುಟುಂಬದವರು ಹಾಗೂ ಸಹಚರರು ಮನೆಯಿಂದ ಎಲ್ಲರನ್ನು ಎಳೆದು ತಂದು ಹೊಲದಲ್ಲಿ ಕೊಲೆ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕಲಘಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಭೇಟಿ ನೀಡಿ ಹತ್ಯೆಯಲ್ಲಿ ಭಾಗಿಯಾದ 16 ಜನರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು ಅವರ ಹುಡುಕಾಟಕ್ಕೆ ಪೊಲೀಸರು ಬಲೆಬಿಸಿದ್ದಾರೆ.

Comments are closed.