
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇನ್ನೆರಡು ತಿಂಗಳ ಒಳಗೆ ಸಮವಸ್ತ್ರ ಒದಗಿಸಬೇಕು ಎಂದು ರಾಜ್ಯ ಹೈಕೋರ್ಟ್ ಮಹತ್ವದ ಆದೇಶವನ್ನು ಬುಧವಾರ ಹೊರಡಿಸಿದೆ.
ಸಮವಸ್ತ್ರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿದ್ದ ಸಲ್ಲಿಸಿದ್ದ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠದಲ್ಲಿಂದು ಈ ಆದೇಶ ನೀಡಿದೆ. ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್(ಕಾಲು ಚೀಲ)ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವಂತೆ ಸೂಚಿಸಿತ್ತು.
ಈ ಸಂಬಂಧ ಕೇಂದ್ರದಿಂದ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲ್ಲವೆಂದು ಸರ್ಕಾರ ಹೇಳಿತು. ಅನುದಾನ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸದಿದ್ದರೆ ಹೇಗೆ(?) ಮಕ್ಕಳ ಉಚಿತ ಶಿಕ್ಷಣಕ್ಕೆ ಅಗತ್ಯ ಕಲ್ಪಿಸುವ ಹೊಣೆ ಸರ್ಕಾರದ್ದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಸದ್ಯ ವಿದ್ಯಾರ್ಥಿಗಳು ಒಂದು ಜೊತೆ ಸಮವಸ್ತ್ರವನ್ನು ವಾರವಿಡೀ ತೊಡಬೇಕಾಗಿದೆ. ತೊಟ್ಟರೆ ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ(?) ಎಂದು ಸರ್ಕಾರವನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್ ಓಕಾ ಅವರು ಪ್ರಶ್ನಿಸಿದರು.
ಅಲ್ಲದೇ ಎಲ್ಲಾ ಸರ್ಕಾರಿ ಶಾಲೆಗಳ 1 ರಿಂದ 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಬೇಕು, ಇನ್ನೆರಡೂ ತಿಂಗಳಲ್ಲಿ ಎರಡನೇ ಜೊತೆ ಸಿದ್ಧ ಸಮವಸ್ತ್ರ (ಹೊಲಿದ) ಒದಗಿಸುವಂತೆ ಆದೇಶ ಹೊರಡಿಸಿತು.
ಕೊಪ್ಪಳದ ವಿದ್ಯಾರ್ಥಿ ಮಂಜುನಾಥ್ ಅವರು ಹೈಕೋರ್ಟ್ಗೆ ಪಿಎಎಲ್ ಅರ್ಜಿ ಸಲ್ಲಿಸಿದ್ದರು.
Comments are closed.