
ಬೆಂಗಳೂರು:ಮಾಜಿ ಪ್ರಧಾನಿ ದೇವೇಗೌಡರು ಲಾಭವಿಲ್ಲದೆ ಏನನ್ನೂ ಹೇಳಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಸ್ಟ್ಯಾಂಡರ್ಡ್ ರಾಜಕಾರಣಿ, ಅವರು ಕೀಳುಮಟ್ಟದ ರಾಜಕಾರಣ ಮಾಡುವವರಲ್ಲ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಸಿದ್ದರಾಮಯ್ಯನವರ ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಸರಕಾರ ಪತನಕ್ಕೆ ಕುಮಾರಸ್ವಾಮಿಯೇ ಕಾರಣ. ಕುಮಾರಸ್ವಾಮಿಯವರ ಲೋಪದೋಷದಿಂದಾಗಿ ಸರಕಾರ ಬಿದ್ದಿದೆ ಎಂದರು.
ಸಿದ್ದರಾಮಯ್ಯನವರು ಯಾರಿಗೂ ಕಣ್ಣೀರು ಹಾಕಿಸಲ್ಲ. ಅವರು ಕಣ್ಣೀರು ಹಾಕಿಸುವ ವ್ಯಕ್ತಿಯೂ ಅಲ್ಲ ಎಂಬುದಾಗಿ ಹೇಳುವ ಮೂಲಕ ಜಮೀರ್ ಅಹ್ಮದ್ ಸಿದ್ದು ಪರ ಬ್ಯಾಟಿಂಗ್ ಬೀಸಿದ್ದಾರೆ.
Comments are closed.