ಕರ್ನಾಟಕ

ಸಂಪುಟ ರಚನೆ: ಸಂಭವನೀಯ 18 ಸಚಿವರ ಪಟ್ಟಿ

Pinterest LinkedIn Tumblr


ನವದೆಹಲಿ(ಆ. 16): ಅಧಿಕಾರಕ್ಕೆ ಬಂದು 3 ವಾರಗಳ ನಂತರ ಬಿಎಸ್ ಯಡಿಯೂರಪ್ಪ ಅವರ ಸಂಪುಟ ರಚನೆಯ ಕಸರತ್ತು ಇದೀಗ ಅಂತಿಮ ಹಂತಕ್ಕೆ ಬಂದಿದೆ. ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಬಯಸುವ ಶಾಸಕರ ಪಟ್ಟಿಯನ್ನು ಹಿಡಿದು ದೆಹಲಿಯಲ್ಲಿದ್ದಾರೆ ಯಡಿಯೂರಪ್ಪ. ನಾಳೆ ಅಮಿತ್ ಶಾ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ. ಆದರೆ, ಬಿಜೆಪಿಯ ಪ್ರಮುಖ ಆರೆಸ್ಸೆಸ್ ಕೊಂಡಿಯಾಗಿರುವ ಬಿ.ಎಲ್. ಸಂತೋಷ್ ಅವರೂ ಬಿಎಸ್​ವೈ ಸಂಪುಟ ರಚನೆಯ ಕಾರ್ಯದಲ್ಲಿ ಕೈ ಜೋಡಿಸಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್. ಸಂತೋಷ್ ಮತ್ತು ಯಡಿಯೂರಪ್ಪ ಅವರ ಭೇಟಿ ಇವತ್ತು ಆಗಿದೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕೆಂದು ಇವರಿಬ್ಬರೂ ಚರ್ಚೆ ನಡೆಸಿದ್ಧಾರೆ. ಇಬ್ಬರೂ ಸೇರಿ ಸಂಭಾವ್ಯ ಸಚಿವರ ಪಟ್ಟಿ ತಯಾರಿಸಲಿದ್ದಾರೆ. ಯಡಿಯೂರಪ್ಪ ಅವರು ನಾಳೆ ಇದೇ ಪಟ್ಟಿಯನ್ನು ಅಮಿತ್ ಶಾ ಮುಂದಿಡಲಿದ್ದಾರೆ.

ಜಾತಿ, ಜಿಲ್ಲೆ, ಆರೆಸ್ಸೆಸ್ ಲೆಕ್ಕಾಚಾರಗಳಡಿ ಯಡಿಯೂರಪ್ಪ ಅವರು ಸಂಭಾವ್ಯ ಸಚಿವರ ಪಟ್ಟಿ ಮಾಡಿಕೊಂಡಿದ್ದಾರೆ. ಅಮಿತ್ ಶಾ ಅವರು ನಾಳೆಯೇ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಹಾಗೆಯೇ ಖಾತೆ ಹಂಚಿಕೆಯೂ ಕೂಡ ನಾಳೆ ಫೈನಲ್ ಆದರೂ ಆಗುವ ಸಂಭವ ಇದೆ. ಮೂಲಗಳ ಪ್ರಕಾರ, ಬಿಎಸ್​ವೈ ಅವರ ಸಂಪುಟ ರಚನೆಯ ಮೊದಲ ಹಂತದಲ್ಲಿ 15-18 ಮಂದಿಗೆ ಸಚಿವರಾಗುವ ಸಾಧ್ಯತೆ ಇದೆ.

ಶೆಟ್ಟರ್​ಗಿಲ್ಲ ಮಂತ್ರಿಭಾಗ್ಯ?
ಇದೇ ವೇಳೆ, ಮಾಜಿ ಮುಖ್ಯಮಂತ್ರಿಯಾಗಿರುವ ಜಗದೀಶ್ ಶೆಟ್ಟರ್ ಇದೇ ಕಾರಣಕ್ಕೆ ಮಂತ್ರಿಗಿರಿಯಿಂದ ವಂಚಿತರಾಗುವ ಭೀತಿ ಇದೆ. ಜಗದೀಶ್ ಶೆಟ್ಟರ್ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲೇ ಇಲ್ಲ. ವರಿಷ್ಠರ ಮನಸ್ಸಲ್ಲೂ ಶೆಟ್ಟರ್ ಅವರಿಲ್ಲವೆನ್ನಲಾಗುತ್ತಿದೆ. ಆದರೆ, ಜಗದೀಶ್ ಶೆಟ್ಟರ್ ಅವರು ಸಂಪುಟ ಸೇರಲು ಮೊದಲಿಂದಲೂ ಪ್ರಯತ್ನ ನಡೆಸುತ್ತಿದ್ದು, ಈಗಲೂ ಮುಂದುವರಿಸಿದ್ದಾರೆ. ಆದರೆ, ಒಮ್ಮೆ ಮುಖ್ಯಮಂತ್ರಿಯಾಗಿದ್ದವರು ಮಂತ್ರಿಯಾಗುವುದು ಗೌರವದ ವಿಷಯವಲ್ಲ ಎಂಬುದನ್ನು ವರಿಷ್ಠರು ಜಗದೀಶ್ ಶೆಟ್ಟರ್ ಅವರಿಗೆ ಮನವರಿಕೆ ಮಾಡುವ ಸಾಧ್ಯತೆ ಇದೆ.

ಬಿಎಸ್​ವೈ ಕೈಯಲ್ಲಿರುವ ಸಂಭಾವ್ಯ ಸಚಿವರ ಪಟ್ಟಿ:
1) ಬಸವರಾಜ್ ಬೊಮ್ಮಾಯಿ, ಲಿಂಗಾಯತ, ಹುಬ್ಬಳ್ಳಿ
2) ಬಸನಗೌಡ ಪಾಟೀಲ್ ಯತ್ನಾಳ್, ಲಿಂಗಾಯತ, ಬಿಜಾಪುರ
3) ಮಾಧುಸ್ವಾಮಿ, ಲಿಂಗಾಯತ, ತುಮಕೂರು
4) ಉಮೇಶ್ ಕತ್ತಿ, ಲಿಂಗಾಯತ, ಬೆಳಗಾವಿ
5) ರೇಣುಕಾಚಾರ್ಯ, ಲಿಂಗಾಯತ, ದಾವಣಗೆರೆ
6) ದತ್ತಾತ್ರೇಯ ಪಾಟೀಲ್ ರೇವೂರ, ಲಿಂಗಾಯತ, ಬೀದರ್
7) ಎಸ್.ಎ. ರಾಮದಾಸ್, ಬ್ರಾಹ್ಮಣ, ಮೈಸೂರು
8) ಆರ್. ಅಶೋಕ್, ಒಕ್ಕಲಿಗ, ಬೆಂಗಳೂರು
9) ಡಾ. ಅಶ್ವತ್ಥ ನಾರಾಯಣ, ಒಕ್ಕಲಿಗ, ಬೆಂಗಳೂರು
10) ಕೆ.ಜೆ. ಭೋಪಯ್ಯ, ಒಕ್ಕಲಿಗ, ಮಡಿಕೇರಿ
11) ಕೆ.ಎಸ್. ಈಶ್ವರಪ್ಪ, ಕುರುಬ, ಶಿವಮೊಗ್ಗ
12) ಕೋಟಾ ಶ್ರೀನಿವಾಸ್ ಪೂಜಾರಿ, ಬಿಲ್ಲವ, ಉಡುಪಿ
13) ಗೋವಿಂದ ಕಾರಜೋಳ, ದಲಿತ, ಬಾಗಲಕೋಟೆ
14) ಎಸ್. ಅಂಗಾರ, ದಲಿತ, ದ. ಕನ್ನಡ
15) ಶ್ರೀರಾಮುಲು, ವಾಲ್ಮೀಕಿ, ಚಿತ್ರದುರ್ಗ/ಬಳ್ಳಾರಿ
16) ಶಿವನಗೌಡ ನಾಯಕ್, ವಾಲ್ಮೀಕಿ, ರಾಯಚೂರು
17) ಪೂರ್ಣಿಮಾ, ಯಾದವ, ಚಿತ್ರದುರ್ಗ
18) ನಾಗೇಶ್, ಪಕ್ಷೇತರ, ಕೋಲಾರ.

Comments are closed.