ಕರ್ನಾಟಕ

ಮೊಟ್ಟೆ , ಶೂ, ಹಾಲು, ಅಕ್ಕಿ ಸಿದ್ದರಾಮಯ್ಯ ತಮ್ಮ ದುಡ್ಡಿನಿಂದ ಕೊಟ್ರಾ!?

Pinterest LinkedIn Tumblr


ಬಾಗಲಕೋಟೆ: ಮೊಟ್ಟೆ ,ಶೂ, ಹಾಲು, ಅಕ್ಕಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಜೇಬಿನ ಹಣದಿಂದ ಕೊಟ್ರಾ ಎಂದು ಬಿಜೆಪಿ ಮುಖಂಡ ಕೆ. ಎಸ್ . ಈಶ್ವರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಲು ಕೊಟ್ಟೆ ,ಮೊಟ್ಟೆ ಕೊಟ್ಟೆ ಶೂ ಕೊಟ್ಟೆ ಎನ್ನುತ್ತಾರೆ. ಆದರೆ ಜನ ನಾನು ಶೂದಿಂದ ಹೊಡೆದರು ಅಂತ ಹೇಳುತ್ತಿಲ್ಲ, ಅನ್ನಭಾಗ್ಯ ಯೋಜನೆಗೆ ಮೋದಿ ಸರ್ಕಾರ ಪ್ರತಿ ಕೆ.ಜಿ ಅಕ್ಕಿಗೆ 28ರೂ ಕೊಡ್ತಾರೆ. ಇದನ್ನು ಸಿದ್ದರಾಮಯ್ಯ ರಾಜ್ಯದ ಜನಕ್ಕೆ ಸ್ಪಷ್ಟ ಪಡಿಸಲಿ ಎಂದರು.

ಕೆಲಸಗಾರ ಮೋದಿ ಗೆಲ್ಲಿಸಿದ್ದಾರೆ

ಕೆಲಸ ಮಾಡೋವರಿಗೆ ವೋಟ್ ಹಾಕಿ, ನಿದ್ದೆ ಮಾಡುವವರಿಗೆ ವೋಟ್ ಹಾಕ್ಬೇಡಿ ಎಂದು ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ಟಾಂಗ್ ಕೊಟ್ಟರು. ಸಿದ್ದರಾಮಯ್ಯ ಸರಿಯಾಗಿ ಹೇಳಿದ್ದಾರೆ. ಕೆಲಸಗಾರ ಮೋದಿ ಗೆಲ್ಲಿಸಿದ್ದಾರೆ. ನಿದ್ದೆ ಮಾಡುವ ಸಿದ್ದರಾಮಯ್ಯ ಮನೆಗೆ ಕಳಿಸಿದ್ದಾರೆ. ಸಿದ್ದರಾಮಯ್ಯ ನಿದ್ದರಾಮಯ್ಯ, ಐದು ವರ್ಷ ನಿದ್ದೆ ಮಾಡಿದರು ಎಂದು ವ್ಯಂಗ್ಯವಾಡಿದರು.

ನಿದ್ದೆ ಮಾಡುವವರಿಗೆ ವೋಟ್ ಕೊಡ್ಬೇಡಿ

ಕೆಲಸ ಮಾಡೋವವರಿಗೆ ವೋಟ್ ಕೊಡಿ, ನಿದ್ದೆ ಮಾಡುವವರಿಗೆ ವೋಟ್ ಕೊಡ್ಬೇಡಿ ಅಂತ ಪ್ರಚಾರ ಮಾಡ್ತುವಿ, ಸಿದ್ದರಾಮಯ್ಯ ಎಷ್ಟೇ ಬಡಿದುಕೊಂಡರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗೋಕೆ ಅಯೋಗ್ಯ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ ಹೇಳಿದರು. ನಾನು ಸಿಎಂ ಎಚ್. ಡಿ ಕೆ ಸಮನ್ವಯ ಸಮಿತಿ ಸಭೆಯಲ್ಲಿ ಭೇಟಿ ಆಗ್ತೀವಿ. ಉಳಿದ ಸಮಯದಲ್ಲಿ ಭೇಟಿ ಆಗೋದು ಅಪರೂಪ ಅಂತಾರೆ. ಇನ್ನು ರಾಜ್ಯದ ಜನರು ಬರ, ಕುಡಿಯೋ ನೀರಿನ ಸಮಸ್ಯೆ ಯಾವಾಗ ಕೇಳ್ತಾರೆ. ಕನಿಷ್ಠ ಮೊದಲು ನೀವಿಬ್ಬರೂ ಭೇಟಿಯಾಗಿ ಚರ್ಚಿಸಿರಿ ಎಂದರು.

ಸಿದ್ದರಾಮಯ್ಯ ಏನು ಗೊತ್ತಿಲ್ಲದೆ ಬಾಯಿಗೆ ಬಂದಂಗೆ ಮಾತನಾಡ್ತಾರೆ. ಬ್ರಿಟಿಷರ ಸಂತತಿ ಇನ್ನೂ ನಮ್ಮ ದೇಶದಲ್ಲಿದೆ. ಯಾರಿದ್ದಾರೆ ಅನ್ನೋದು ನಿಮಗೂ ಗೊತ್ತಿದೆ. ಅವರ ಸೆರಗು ಹಿಡಿದುಕೊಂಡು ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಅವರ ಸೆರಗು ಹಿಡಿದುಕೊಂಡು ಮತ್ತೆ ಸಿದ್ದರಾಮಯ್ಯ ಸಿಎಂ ಕನಸು ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.

Comments are closed.