
ಬೆಂಗಳೂರು: ಇಂದು ನಡೆದ ಜೆಡಿಎಸ್ ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಖರ್ಗೆ ಸೋಲಲು ಒಕ್ಕಲಿಗರು ಕಾರಣವಾ? ಜೆಡಿಎಸ್ ಜೊತೆ ಹೋಗಿದ್ದೆ ಸೋಲಿಗೆ ಕಾರಣ ಆಯ್ತಂತೆ . ಪ್ರತಿ ಕ್ಷಣ ಎಷ್ಟು ನೋವನ್ನು ಅನುಭವಿಸ್ತಿದ್ದೇನೆ ಅನ್ನೋದು ನನಗೆ ಗೊತ್ತು. ಕುಮಾರಸ್ವಾಮಿ ಹೇಗೋ ಸರ್ಕಾರ ನಡೆಸ್ತಾ ಇದಾರೆ. ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್ ಎರಡು ಬಾರಿ ಸೋಲಿಸಿತ್ತು ಎಂದು ಹೇಳಿದ್ದಾರೆ.
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನ ಘೋಷಣೆ ಮಾಡಲ್ಲವೆಂದ ದೇವೇಗೌಡರು, ಇಂದು ರಾಜ್ಯಾಧ್ಯಕ್ಷರ ಘೋಷಣೆ ಮಾಡಲ್ಲ. ಈ ಬಗ್ಗೆ ಚರ್ಚೆ ಮಾಡ್ತೀನಿ. ಆದ್ರೆ ಪರಿಶಿಷ್ಟ ಸಮುದಾಯಕ್ಕೆ ಸ್ಥಾನ ಕೊಡ್ತೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಕುಮಾರಸ್ವಾಮಿ ಸಿಎಂ ಆದ ಬಗ್ಗೆ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿಯವರನ್ನು ಸಿಎಂ ಮಾಡಿ ಅಂತ ಕೇಳಿಲ್ಲ. ಬಹಳ ಪ್ರಾಮಾಣಿಕವಾಗಿ ಹೇಳ್ತಾ ಇದ್ದೇನೆ. 37ಸೀಟು ತಗೊಂಡು ಸಿಎಂ ಅಂದ್ರೆ ಯಾವ ಧರ್ಮ ಹೇಳಿ..? ದೆಹಲಿ ಹೈಕಮಾಂಡ್ ಬಂದು ಕುಮಾರಸ್ವಾಮಿಯವರೇ ಸಿಎಂ ಆಗಬೇಕು ಅಂದ್ರು. ಆ ಸಂದರ್ಭದಲ್ಲಿ 2008ಸರ್ಕಾರದಲ್ಲಾದ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೆ ಅವರ ಹತ್ರ. ಖರ್ಗೆ, ಮುನಿಯಪ್ಪ ಯಾರನ್ನಾದ್ರು ಸಿಎಂ ಮಾಡಿ ಎಂದಿದ್ದೆ. ಆದ್ರೂ ಕುಮಾರಸ್ವಾಮಿ ಅವರನ್ನೇ ಸಿಎಂ ಮಾಡಿ ಎಂದ್ರು. ಈಗ ಕೆಲ ನಾಯಕರು ಹೈಕಮಾಂಡ್ ಜೊತೆ ಮಾತಾಡಿದಾರೆ. ಅದು ಮಾಧ್ಯಮದವರಿಗೂ ಗೊತ್ತು. ಜೆಡಿಎಸ್ ಸಹವಾಸ ಮಾಡಿ ಸೋಲಾಯ್ತು. ಬೆನ್ನಿಗೆ ಚೂರಿ ಹಾಕಿದ್ರು ಎನ್ನುವ ರೀತಿಯಲ್ಲೂ ಮಾತನಾಡಿದ್ರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಏನೆಲ್ಲಾ ಆಯ್ತು ಅಂತ ನೀವೇ ನೋಡಿದ್ದೀರಿ. ಬಿಜೆಪಿಯವರು ಏನು ಮಾಡಿದ್ರು ಅಂತ ಗೊತ್ತಿದೆ ಎಲ್ಲರಿಗೂ. ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಹಾಗೆಲ್ಲ ಮಾಡಬಾರದು. ಮನವಿ ಕೊಟ್ಟು ಕಷ್ಟ ಹೇಳಿಕೊಳ್ಳಬೇಕಿತ್ತು. ಸಾವಿರಾರು ಜನ ಜನತಾದರ್ಶನದ ಬಳಿ ಕಾಯ್ತಾ ಇದ್ರು. ಕುಮಾರಸ್ವಾಮಿ ಹೇಳಿದ್ರು ಪ್ರತಿಭಟಿಸೋರು ಕೇಳಲಿಲ್ಲ. ತಾಳ್ಮೆಗೂ ಒಂದು ಮಿತಿ ಇರತ್ತಲ್ವಾ? ಎಂದು ಪ್ರಶ್ನಿಸಿದ್ದಾರೆ.
Comments are closed.