
ಬೆಳಗಾವಿ: ಮನೆಗೆ ಬೆಂಕಿ ಬಿತ್ತು. ಅದರಲ್ಲಿದ್ದ ಒಟ್ಟೂ ಮೂವರಲ್ಲಿ ಇಬ್ಬರು ಹೇಗೋ ಪಾರಾದರು. ಆದರೆ ಓರ್ವ ಎಂಟು ವರ್ಷದ ಬಾಲಕಿ ಸಜೀವ ದಹನವಾದಳು.
ಇಂಥದ್ದೊಂದು ದುರ್ಘಟನೆ ನಡೆದಿದ್ದು ಅನಗೋಳದಲ್ಲಿ. ದೇವರ ಫೋಟೋ ಎದುರು ಹಚ್ಚಿಟ್ಟಿದ್ದ ದೀಪವೇ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ. ರಾತ್ರಿ ಈ ಘಟನೆ ನಡೆದಿದ್ದು ಮೂವರೂ ಮಲಗಿದ್ದರು. ಹಚ್ಚಿದ್ದ ನಂದಾದೀಪ ಬಾಲಕಿಯ ಪ್ರಾಣವನ್ನೇ ಕಸಿಯಿತು
ಫೋಟೋ ಎದುರು ಹಚ್ಚಿಟ್ಟ ದೀಪದಿಂದ ಮನೆಗೆ ಬೆಂಕಿ: ಪುಟ್ಟ ಬಾಲಕಿ ಸಜೀವ ದಹನ
June 25, 2019 11:45 AM No Comments
ಬೆಳಗಾವಿ: ಮನೆಗೆ ಬೆಂಕಿ ಬಿತ್ತು. ಅದರಲ್ಲಿದ್ದ ಒಟ್ಟೂ ಮೂವರಲ್ಲಿ ಇಬ್ಬರು ಹೇಗೋ ಪಾರಾದರು. ಆದರೆ ಓರ್ವ ಎಂಟು ವರ್ಷದ ಬಾಲಕಿ ಸಜೀವ ದಹನವಾದಳು.
ಇಂಥದ್ದೊಂದು ದುರ್ಘಟನೆ ನಡೆದಿದ್ದು ಅನಗೋಳದಲ್ಲಿ. ದೇವರ ಫೋಟೋ ಎದುರು ಹಚ್ಚಿಟ್ಟಿದ್ದ ದೀಪವೇ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ. ರಾತ್ರಿ ಈ ಘಟನೆ ನಡೆದಿದ್ದು ಮೂವರೂ ಮಲಗಿದ್ದರು.
ಬೆಳಗಾವಿ: ಮನೆಯಲ್ಲಿ ದೇವರ ಫೋಟೋ ಮುಂದೆ ಹಚ್ಚಿಟ್ಟ ನಂದಾದೀಪವೇ ಬಾಲಕಿಯ ಪ್ರಾಣವನ್ನೇ ಕಸಿದ ಘೋರ ದುರಂತ ಘಟನೆ ಬೆಳಗಾವಿಯ ಆನಿಗೋಳದಲ್ಲಿ ನಡೆದಿದೆ.
ನಂದಾದೀಪದ ಬೆಂಕಿ ಹಾಸಿಗೆಗೆ ತಗುಲಿ ಹೊತ್ತಿ ಉರಿದ ಕಾರಣ ಕಸ್ತೂರಿ (8) ಸಜೀವವಾಗಿ ದಹನವಾಗಿದ್ದಾಳೆ.
ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಮನೆಯಲ್ಲಿದ್ದ ಬಾಲಕಿಯ ಪೋಷಕರು ಅಪಾಯದಿಂದ ಪಾರಾಗಿದ್ದಾರೆ. ಸುಟ್ಟ ಗಾಯವಾಗಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ದೇವರ ದೀಪ ಕೆಳಗೆ ಬಿದ್ದು ಹಾಸಿಗೆಗೆ ತಗುಲಿ ಬೆಂಕಿ ಹೊತ್ತಿದೆ. ಆ ವೇಳೆ ಎಚ್ಚರಗೊಂಡ ಪೋಷಕರು ತಕ್ಷಣ ದೂರ ಸರಿದು ಅಪಾಯದಿಂದ ಪಾರಾದರೆ ಬಾಲಕಿ ಮಾತ್ರ ಸಜೀವ ದಹನವಾಗಿದ್ದಾಳೆ.
ಘಟನೆ ಕುರಿತಂತೆ ಟೀಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.