ಕರ್ನಾಟಕ

ಮದುವೆ ಸಂಭ್ರಮಕ್ಕೆ ತೆರಳುತ್ತಿದ್ದ ದಂಪತಿ ಹೆತ್ತ ಕಂದಮ್ಮನ ಎದುರೇ ಅಪಘಾತದಿಂದ ಸಾವು

Pinterest LinkedIn Tumblr

 

 

ಮಗುವಿನೊಂದಿಗೆ ಮದುವೆಗೆ ತೆರಳುತಿದ್ದ ದಂಪತಿಗಳು ಭೀಕರ ಅಪಘಾತಕ್ಕೆ ಸಿಲುಕಿ ಕಂದನ ಕಣ್ಣೆದುರಿಗೆ ಹೆತ್ತವರು ಹೆಣವಾದ ದಾರುಣ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

 

ಮದುವೆ ಸಂಭ್ರಮಕ್ಕೆ ತೆರಳುತ್ತಿರುವ ದಂಪತಿ ಹೆತ್ತ ಕಂದಮ್ಮನ ಎದುರೇ ಸ್ಮಶಾನ ಸೇರಿದ್ದಾರೆ. ಈ ಮನಕಲಕುವ ಘಟನೆ ನಡೆದದ್ದು ಚಾಮರಾಜನಗರದಲ್ಲಿ. ಕಾಗಲವಾಡಿ ಗ್ರಾಮದ ಮಾದೇಶ್ ಮತ್ತು ಮಣಿ ಎಂಬ ದಂಪತಿ ನಂಜನಗೂಡಿನ ಶಿರಮಳ್ಳಿ ಗ್ರಾಮಕ್ಕೆ ಮದುವೆಗೆಂದು ಬೈಕಿನಲ್ಲಿ ತೆರಳುತಿದರು. ಚಾಮರಾಜನಗರ ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಮುತ್ತಿಗೆ ಗ್ರಾಮದ ಬಳಿ ಮಗು ಮೂತ್ರ ವಿಸರ್ಜನೆ ಮಾಡಬೇಕು ಎಂದಾಗ ಮಗುವನ್ನು ಕೆಳಗೆ ಇಳಿಸಿ ದಂಪತಿಗಳಿಬ್ಬರು ಬೈಕಿನ ಮೇಲೆ ಕುಂತಿದರು. ಇದೆ ಸಂದರ್ಭದಲ್ಲಿ ಹಿಂಬದಿಯಿಂದ ಜವರಾಯನಾಗಿ ಬಂದ ತಮಿಳುನಾಡು ಮೂಲದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

ಮಗು ಆಶ್ಚರ್ಯಕರ ರೀತಿಯಲ್ಲಿ ಬಚಾವಾಗಿ ಹೆತ್ತ ತಂದೆ ತಾಯಿಗಳಿಬ್ಬರು ಕಣ್ಣೆದುರಿಗೇ ಪ್ರಾಣ ಬಿಟ್ಟರು. ಆ ಸಂಧರ್ಭದಲ್ಲಿ ಮಗು ದಿಕ್ಕು ತೋಚದೆ ಸತ್ತು ಬಿದ್ದ ಅಪ್ಪ ಅಮ್ಮನ ಬಳಿ ಕೂತು ರೋಧಿಸುತ್ತಿದ್ದ ದೃಶ್ಯ ನಿಜವಾಗಿಯೂ ಹೇಳತೀರದು.

 

ಇವಿಷ್ಟು ಚಾಮರಾಜನಗರ ಕಥೆಯಾದರೆ, ಇತ್ತ ಶಿವಮೊಗ್ಗದಲ್ಲಿ ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರು ದುರ್ಮರಣ ಹೊಂದಿದ್ದಾರೆ ಕುಂಚೇನಹಳ್ಳಿಯಲ್ಲಿ ವಾಲ್ಯಾನಾಯ್ಕ್ ಮತ್ತು ಸುಮಿಬಾಯಿ ಗಾರೆ ಕೆಲಸಕ್ಕೆಂದು ತೆರಳುವ ವೇಳೆ ಲಾರಿ ಗುದ್ದಿರುವುದಕ್ಕೆ ಸಾವನಪ್ಪಿದ್ದಾರೆ. ಒಟ್ಟಿನಲ್ಲಿ ಸಾವಿನ ಗುರುವಾರ ಒಟ್ಟು ನಾಲ್ವರು ಸಾವನಪ್ಪಿದ್ದು, ಕುಟುಂಬಸ್ಥರು ಆಕ್ರಂದನ ಮುಗಿಲು ಮಟ್ಟಿದೆ.

 

Comments are closed.