ಕರ್ನಾಟಕ

ಅಮಾನತ್ತಿನ ಬಳಿಕ ಸುದ್ದಿಗೋಷ್ಠಿ ಕರೆದು ರೋಷನ್ ಬೇಗ್ ಹೇಳಿದ್ದೇನು…?

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಉಪ್ಪು ತಿಂದವರು ತುಂಬ ಜನ ಇದ್ದಾರೆ. ರಾಜಣ್ಣ, ಜಾರಕಿಹೊಳಿ ಉಪ್ಪು ತಿಂದಿಲ್ವಾ? ಉಪ್ಪು ತಿಂದವರು ಎಲ್ಲರೂ ನೀರು ಕುಡಿಯಬೇಕಲ್ವಾ? ಎಂದು ಕಾಂಗ್ರೆಸ್‌ನಿಂಗ ಸಸ್ಪೆಂಡ್‌ ಆಗಿರುವ ಶಾಸಕ ರೋಶನ್‌ ಬೇಗ್‌ ಪ್ರಶ್ನಿಸಿದ್ದಾರೆ.

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ರೋಶನ್‌ ಬೇಗ್‌, ಕೆಎನ್‌ ರಾಜಣ್ಣ, ರಮೇಶ್‌ ಜಾರಕಿಹೊಳಿ ಉಪ್ಪು ತಿಂದಿಲ್ವಾ? ಕೆ ಎಚ್ ಮುನಿಯಪ್ಪರನ್ನ ಸೋಲಿಸಿದವರು ಉಪ್ಪು ತಿಂದಿಲ್ವಾ? ತುಂಬಾ ಜನ ಉಪ್ಪು ತಿಂದಿದ್ದಾರೆ. ಎಲ್ಲರೂ ನೀರು ಕುಡಿಯಬೇಕಲ್ವಾ? ಎಂದರು.

ಫ್ರೇಜರ್ ಟೌನ್ನ ತಮ್ಮ ನಿವಾಸದಲ್ಲಿ ತಮ್ಮ ಪುತ್ರ ರುಮಾನ್‌ ಬೇಗ್‌ ಜತೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ರೋಶನ್ ಬೇಗ್, ಪಕ್ಷದ ಬಗ್ಗೆ ಮಾತ್ರ ನಾನು ಮಾತನಾಡುತ್ತನೆ.

ನಿನ್ನೆ ರಾತ್ರಿ ಪಕ್ಷದಿಂದ ಸಸ್ಪೆಂಡ್ ಮಾಡಿರುವ ಸುದ್ದಿಬಂತು. ಸತ್ಯ ಹೇಳೋದು ಅಪರಾಧವಾ? ಈಗಲೂ ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ. ರಾಜ್ಯ ನಾಯಕರ ಬಗ್ಗೆ ನಾನು ಮಾಡಿರುವ ಟೀಕೆಯಲ್ಲಿ ಸತ್ಯಾಂಶ ಇದೆ ಎಂದರು.

ರಾಮಲಿಂಗಾರೆಡ್ಡಿ, ಎಚ್ ಕೆ ಪಾಟೀಲ್, ಕೆ ಎಚ್ ಮುನಿಯಪ್ಪ,ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಕಾಂಗ್ರೆಸ್ಗೆ ಒಂದೇ ಒಂದು ಸೀಟು ಬಂತು. ಕೆ ಎಚ್ ಮುನಿಯಪ್ಪರನ್ನ ಕಾಂಗ್ರೆಸ್ ನವರೇ ಸೋಲಿಸಿದರು. ಅವರ ಮೇಲೆ ಯಾಕೆ ಕ್ರಮವಿಲ್ಲ. ಮಂಡ್ಯದಲ್ಲಿ ಓಪನ್ ಆಗಿ ಸುಮಲತಾಗೆ ಬೆಂಬಲ ವ್ಯಕ್ತಪಡಿಸಿದವರ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ. ನಾನು ನನ್ನ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಲೀಡ್ ಕೊಡಿಸಿದ್ದೆ. ಆದರೆ ಕೆಪಿಸಿಸಿ ಅಧ್ಯಕ್ಷರ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದಿದೆ ಎಂದು ರೋಶನ್‌ ಬೇಗ್‌ ವಿವರಿಸಿದರು.

ಪ್ರಜಾಪ್ರಭುತ್ವದಲ್ಲಿ ಓಪನ್ ಚರ್ಚೆ ಆಗಬೇಕು. ಕಾಂಗ್ರೆಸ್ನ ಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯವನ್ನಷ್ಟೇ ನಾನು ಹೇಳಿದ್ದು. ಕ್ಯಾಂಪೇನ್ನಲ್ಲಿ ನಮ್ಮನ್ನು ಇನ್ವಾಲ್ ಮಾಡಿಕೊಂಡಿಲ್ಲ. ತುಮಕೂರಿನಲ್ಲಿ ಮುದ್ದೇಹನುಮೇಗೌಡರನ್ನ ಬಲಿ ಕೊಟ್ರು. ಮುದ್ದಹನುಮೇಗೌಡರು ಉತ್ತಮ ಸಂಸತ್ ಪಟು. ನಾನು ಈಗಲೂ ಕಾಂಗ್ರೆಸ್ನ ಶಿಸ್ತಿನ ಸಿಪಾಯಿ ಎಂದು ರೋಶನ್ ಬೇಗ್ ತಿಳಿಸಿದರು.

ನನ್ನ ಸಸ್ಪೆಂಡ್‌ಗೆ ಸಿದ್ದು ಪ್ರೆಷರ್‌ ಹಾಕಿರಬಹುದು
ಸಿದ್ದರಾಮಯ್ಯ ಕೂಡ ನನ್ನ ಮೇಲೆ ಕ್ರಮಕ್ಕೆ ಪ್ರೆಷರ್ ಹಾಕಿರಬಹುದು ಎಂದ ರೋಶನ್‌ ಬೇಗ್‌, ಕಾಂಗ್ರೆಸ್‌ಗೆ ಈ ಗತಿ ಬಂತಲ್ಲ ಅನ್ನೋ ನೋವಿನಿಂದ ಅಂತಹ ಹೇಳಿಕೆ ನೀಡಿದ್ದೆ. ಎಕ್ಸಿಟ್ ಪೋಲ್ ಬಂದಾಗ ನಾನು ಹೇಳಿದ ಮಾತದು. ಮುಂದೆ ಪಕ್ಷದ ನಾಯಕರನ್ನು ಭೇಟಿ ಮಾಡ್ತೀನಿ. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಎಚ್ ಕೆ ಪಾಟೀಲ್ ಅವರನ್ನ ಭೇಟಿ ಮಾಡ್ತೀನಿ. ಕಾರ್ಯಕರ್ತರ ಅಭಿಪ್ರಾಯವನ್ನಷ್ಟೇ ಹೇಳಿದ್ದೇನೆ ಎಂದರು.

Comments are closed.