ಬೆಂಗಳೂರು: ಎಟಿಎಂನಲ್ಲಿ ದುಡ್ಡು ಡ್ರಾ ಮಾಡಿದ್ದು, ಕೆಲ ಗಂಟೆಗಳಲ್ಲೇ ಅಕೌಂಟ್‌ನಿಂದ ಹಣ ಮಾಯವಾದ ಘಟನೆ, ಬೆಂಗಳೂರಿನ ಲ್ಯಾವೆಲ್ ರಸ್ತೆಯಲ್ಲಿರುವ ಎಟಿಎಂನಲ್ಲಿ ನಡೆದಿದೆ.
ಇದರಲ್ಲಿ ಇಬ್ಬರು ವಿದೇಶಿಗರ ಕೈವಾಡವಿದ್ದು, ಸ್ಕಿಮ್ಮರ್ ಮೆಷಿನ್ ಬಳಸಿ ಎಟಿಎಂನಲ್ಲಿದ್ದ ಹಣ ದೋಚಲಾಗಿದೆ. ರವಿ ಎಂಬುವವರ ಅಕೌಂಟ್ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಆದ ಚಂದ್ರಶೇಖರ್ ತಲ್ವಾರ್ ಎಂಬುವರ ಅಕೌಂಟ್‌ಗೆ ಕನ್ನ ಹಾಕಲಾಗಿದ್ದು, 59ಸಾವಿರ ರೂಪಾಯಿ ಕಳ್ಳತನವಾಗಿದೆ.
ಇನ್ನು ಸ್ಕಿಮ್ಮರ್ ಮಷಿನ್ ಬಳಸಿದ್ರೆ, ಅದರಲ್ಲಿ ಹಣ ಡ್ರಾ ಮಾಡುವವರ ಪಾಸ್‌ವರ್ಡ್ ರೆಕಾರ್ಡ್ ಆಗತ್ತೆ. ಈ ಮೂಲಕ ಕಳ್ಳರು ನಕಲಿ ಎಟಿಎಂ ಬಳಸಿ, ಪಾಸ್‌ವರ್ಡ್ ಹಾಕಿ, ಹಣ ದೋಚುತ್ತಾರೆ. ಇದೇ ಪ್ಲಾನ್ ಇಟ್ಟುಕೊಂಡಿದ್ದ ವಿದೇಶಿಗರು, ಎಟಿಎಂನಲ್ಲಿ ಮಷಿನ್ ಅಳವಡಿಸಿ, 59ಸಾವಿರ ರೂಪಾಯಿ ಎಗರಿಸಿದ್ದಾರೆ.
ಇನ್ನು ಹಣ ಕಳೆದುಕೊಂಡವರಿಬ್ಬರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಸಿಸಿಕ್ಯಾಮೆರಾ ದೃಶ್ಯ ಆಧರಿಸಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.