ಕರ್ನಾಟಕ

2ನೇ ಶನಿವಾರದ ಜೊತೆ 4 ನೇ ಶನಿವಾರವೂ ಸರ್ಕಾರಿ ರಜಾ!!

Pinterest LinkedIn Tumblr


ಸರ್ಕಾರಿ ನೌಕರರಿಗೆ ಎಚ್​ಡಿಕೆ ನೇತೃತ್ವದ ಕುಮಾರಸ್ವಾಮಿ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಹೌದು ಇನ್ಮುಂದೆ ಸರ್ಕಾರಿ ನೌಕರರಿಗೆ ನಾಲ್ಕು ಭಾನುವಾರಗಳ ಜೊತೆ ಎರಡು ಶನಿವಾರ ಕೂಡ ರಜೆ ಸಿಗಲಿದೆ. ಹೌದು ತಿಂಗಳಿನ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆಗೆ ಸಿಎಂ ಅಸ್ತು ಎಂದಿದ್ದಾರೆ.

ಇದರೊಂದಿಗೆ ಕನಕಜಯಂತಿ ಹಾಗೂ ವಾಲ್ಮೀಕಿ ಜಯಂತಿಗೂ ಸರ್ಕಾರಿ ರಜೆ ನೀಡಲಾಗುತ್ತಿದೆ. ಈ ಮೊದಲು ಕನಕ ಜಯಂತಿ ಹಾಗೂ ವಾಲ್ಮೀಕಿ ಜಯಂತಿಯಂತ ಆಚರಣೆ ರಜೆಗಳಲ್ಲಿ ಕಡಿತ ತರಲು ಚಿಂತನೆ ನಡೆದಿತ್ತು. ಆದರೆ ಈ ರಜೆ ಕಡಿತಕ್ಕೆ ವಿರೋಧ ವ್ಯಕ್ತವಾಗ್ತಿರೋದರಿಂದ ಕನಕಜಯಂತಿ ಮತ್ತು ವಾಲ್ಮೀಕಿ ಜಯಂತಿಗೆ ರಜೆ ಮುಂದುವರಿಸಲಾಗುತ್ತಿದೆ.

ಆದರೆ ಸಾಂದರ್ಭಿಕವಾಗಿ ವರ್ಷಕ್ಕೆ 15 ರಜೆ ನೀಡಿದ್ದ ಸರ್ಕಾರ ಇದರಲ್ಲಿ 5 ರಜೆ ಕಡಿತಗೊಳಿಸಿದ್ದು, ಇನ್ಮುಂದೆ ಸರ್ಕಾರಿ ಉದ್ಯೋಗಸ್ಥರಿಗೆ 10 ದಿನ ಮಾತ್ರ ರಜೆ ಸಿಗಲಿದೆ. ಈ ಹಿಂದೆ ಕುಮಾರಸ್ವಾಮಿ ನಾಲ್ಕನೇ ಶನಿವಾರ ರಜೆ ನೀಡುವುದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈಗ ರಜೆ ಅಂಗೀಕರಿಸಿ ಆದೇಶ ಹೊರಡಿಸಿದ್ದಾರೆ.

Comments are closed.