ಕರ್ನಾಟಕ

ಸಂಸತ್ ಭವನದ ಎದುರು ಫೋಟೋ ತೆಗೆಸಿಕೊಂಡ ಸಂಸದೆ ಸುಮಲತಾ ಹೇಳಿದ್ದೇನು…?

Pinterest LinkedIn Tumblr

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಸುಮಲತಾ ಅಂಬರೀಶ್ ಗುರುವಾರ ಸಂಸತ್ ಭವನದ ಎದುರು ಫೋಟೋ ತೆಗೆಸಿಕೊಂಡು ಅದನ್ನು ತಮ್ಮ ಫೇಸ್‌ಬುಕ್ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ.

ಬಳಿಕ, ಪ್ರಜಾಪ್ರಭುತ್ವದ ದೇಗುಲಕ್ಕೆ ಇದೊಂದು ಸುದೀರ್ಘ ಪಯಣ. ಜೈ ಹಿಂದ್, ಜೈ ಕರ್ನಾಟಕ. ಇದೊಂದು ಹೆಮ್ಮೆ, ಗೌರವದ ಸಂಗತಿ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್‌ ಪ್ರಭಾವಿ ಮೈತ್ರಿ ಅಭ್ಯರ್ಥಿ ಎದುರು ಸ್ಪರ್ಧಿಸಿ ಅಭೂತಪೂರ್ವ ಗೆಲುವು ಪಡೆದಿದ್ದ ಸುಮಲತಾ, ಮಂಡ್ಯದಲ್ಲಿ ಅಂಬರೀಶ್ ಕನಸು ನನಸು ಮಾಡುವುದಾಗಿ ಮತ್ತು ಕ್ಷೇತ್ರದ ಎಲ್ಲ ರೀತಿಯ ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ.

ಅಲ್ಲದೆ ಬಿಜೆಪಿಗೆ ಬೆಂಬಲ ನೀಡಿದರೂ, ಪಕ್ಷೇತರರಾಗಿಯೇ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

Comments are closed.