ಕರ್ನಾಟಕ

ಸ್ಥಳೀಯ ಸಂಸ್ಥೆ ಚ್ವುನಾವಣೆಯಲ್ಲಿ ಯಡಿಯೂರಪ್ಪರ ತವರಾದ ಶಿಕಾರಿಪುರದಲ್ಲಿ ‘ಕೈ’ಗೆ ಜಯ; ಬಿಎಸ್​ವೈಗೆ ಮುಖಭಂಗ

Pinterest LinkedIn Tumblr

ಶಿವಮೊಗ್ಗ: ರಾಜ್ಯದ ಕೆಲವು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್‍ ಹೆಚ್ಚಿನ ಸ್ಥಾನಗಳನ್ನು ಪಡೆದರೆ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ವಿಶೇಷವೆಂದರೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ತವರಾದ ಶಿಕಾರಿಪುರದಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ ಜಯಭೇರಿ ಬಾರಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪುರಸಭೆ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್-10, ಜೆಡಿಎಸ್-07, ಬಿಜೆಪಿ- 02, ಪಕ್ಷೇತರ-03, ಬಿಎಸ್‍ಪಿ- 01 ಸ್ಥಾನಗಳನ್ನು ಪಡೆದಿದೆ. ಈ ಮೂಲಕ ದೇವನಹಳ್ಳಿ ಪುರಸಭೆ ಅತಂತ್ರ ಫಲಿತಾಂಶ ಬಂದಿದೆ. ಆದರೆ, ನೆಲಮಂಗಲ ಪುರಸಭೆ ಜೆಡಿಎಸ್ ತೆಕ್ಕೆಗೆ ಜಾರಿದೆ. ಇಲ್ಲಿ ಜೆಡಿಎಸ್ – 13, ಕಾಂಗ್ರೆಸ್- 07, ಬಿಜೆಪಿ- 02, ಪಕ್ಷೇತರ- 01 ಸ್ಥಾನಗಳನ್ನು ಪಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ, ಹೊಸನಗರ, ಶಿರಾಳಕೊಪ್ಪ, ಸ್ಥಳೀಯ ಸಂಸ್ಥೆಗಳಿಗೆ ಮೇ 29 ರಂದು ಚುನಾವಣೆ ನಡೆದಿತ್ತು. ಸೊರಬ ಪ.ಪಂ. ಗೆ ಜೂನ್ 1 ರಂದು ಮತ್ತು ನೆಲಮಂಗಲ ಪುರಸಭೆ, ದೇವನಹಳ್ಳಿ ಪುರಸಭೆಗೆ ಮೇ 29 ರಂದು ಚುನಾವಣೆ ನಡೆದಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಸ್ವಕ್ಷೇತ್ರ ಶಿಕಾಪುರ ಪುರಸಭೆ ಕಾಂಗ್ರೆಸ್ ಪಾಲಾಗಿದ್ದು, ಬಿಜೆಪಿಗೆ ಮುಖಭಂಗವಾಗಿದೆ. ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ 12, ಬಿಜೆಪಿ 8 ಮತ್ತು 3ರಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ. ಇದರೊಂದಿಗೆ ಶಿವಮೊಗ್ಗ ಪುರಸಭೆಯ ಆಡಳಿತ ಕಾಂಗ್ರೆಸ್ ಪಾಲಾಗಿದೆ.

ಶಿವಮೊಗ್ಗ ಜಿಲ್ಲೆಯ ಒಟ್ಟು 5 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿಕೂಟ 3ರಲ್ಲಿ ಮತ್ತು ಬಿಜೆಪಿ 2ರಲ್ಲಿ ಮೇಲುಗೈ ಸಾಧಿಸಿದೆ. ಇದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಮುಖಭಂಗವಾಗಿದೆ.

ಪುರಸಭೆ 1ನೇ ವಾರ್ಡ್‍ನಲ್ಲಿ ಪ್ರಶಾಂತ್ 504 ಮತಗಳಿಂದ ಜಯಭೇರಿ ಭಾರಿಸಿದ್ದಾರೆ. 9 ನೇ ವಾರ್ಡ್ ರಮೇಶ್ 599 ಮತಗಳಲ್ಲಿ ಗೆಲುವು ಸಾಧಿಸಿದ್ದಾರೆ. 17 ನೇ ವಾರ್ಡ್ ನಲ್ಲಿ ನಾಗರಾಜ್ ಗೌಡ ಕಾಂಗ್ರೆಸ್ ಅಭ್ಯರ್ಥಿ ಜಯ ದಾಖಲಿಸಿದ್ದಾರೆ.

2ನೇ ವಾರ್ಡ್ ಪ್ರಕಾಶ್ ಗೋಣಿ 536 ಮತಗಳಿಂದ ಜಯಗಳಿಸಿದ್ದಾರೆ. 10-ನೇ ವಾರ್ಡ್‍ನಲ್ಲಿ ಮಹೇಶ್ ಹುಲ್ಮಾರ್ 386 ಮತಗಳಿಂದ ಗೆದ್ದಿದ್ದಾರೆ. 3 ನೇ ವಾರ್ಡ್‍ನಲ್ಲಿ ಬಿಜೆಪಿಯ ಸುನಂದಾ ಮಂಜು 416 ಮತಗಳಿಂದ ಹಾಗೂ 11 ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಶಂಕುತಲಾ ಗೋಣಿ ಶಿವಪ್ಪ 692 ಗಳಿಂದ ಜಯಸಾಧಿಸಿದ್ದಾರೆ. 18ನೇ ವಾರ್ಡ್‍ನಲ್ಲಿ ಬಿಜೆಪಿಯ ಪಾಲಕ್ಷಪ್ಪ 936 ಮತಗಳಿಂದ ಜಯ ದಾಖಲಿಸಿದ್ದಾರೆ. 4 ನೇ ವಾರ್ಡ್‍ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿಸಿದ್ದು, ಇಬ್ಬರು ಅಭ್ಯರ್ಥಿಗಳು ತಲಾ 283 ಮತಗಳು ಪಡೆದಿದ್ದಾರೆ. ಬಿಜೆಪಿಯ ರೇಣುಕಸ್ವಾಮಿ ಹಾಗೂ ಕಾಂಗ್ರೆಸ್‍ನ ರೇಣುಕಮ್ಮ ತಲಾ 283 ಮತಗಳನ್ನು ಪಡೆದಿದ್ದರು. ಅಂತಿಮವಾಗಿ ಇಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಇದರಲ್ಲಿ ಬಿಜೆಪಿಯ ರೇಣುಕಸ್ವಾಮಿ ಗೆಲುವು ಸಾಧಿಸಿದ್ದಾರೆ ಎಂದು ಪ್ರಕಟಿಸಲಾಗಿದೆ. 5 ನೇ ವಾರ್ಡ್ ಬಿಜೆಪಿ ಕಾಂಗ್ರೆಸ್ ಸಮಸಮ ಸಾಧಿಸಿದ್ದಾರೆ. ಕಾಂಗ್ರೆಸ್‍ನ ಜ್ಯೋತಿ ಹರಿಹರ ಸಿದ್ದು 212 ಹಾಗೂ ಬಿಜೆಪಿ ಎಚ್ ಎಂ ಜ್ಯೋತಿ ಕೂಡ 212 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಲಾಟರಿ ಪ್ರಕ್ರಿಯೆ ನಡೆಯಬೇಕಿದೆ.

11 ಸ್ಥಾನಗಳ ಹೊಸನಗರ ಪಟ್ಟಣಪಂಚಾಯ್ತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು 7 ಸ್ಥಾನದಲ್ಲಿ ಗೆಲ್ಲುವ ಮೂಲಕ ಜಯಭೇರಿ ಭಾರಿಸಿದೆ. ಶೂನ್ಯದಿಂದ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಬಿಜೆಪಿ ಕೇವಲ ನಾಲ್ಕು ಸ್ಥಾನ ಗೆಲ್ಲುವ ಮೂಲಕ ಹಿನ್ನಡೆ ಅನುಭವಿಸಿದೆ.

ಒಂದನೇ ವಾರ್ಡ್ ನಿಂದ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಬಿಜೆಪಿಯ ಸುರೇಂದ್ರ ಕೋಟ್ಯಾನ್, ಮೈತ್ರಿಕೂಟದ ಕೃಷ್ಣವೇಣಿ, ಚಂದ್ರಕಲಾ, ಅಶ್ವಿನಿ ಕುಮಾರ್ ಗೆದ್ದ ಪ್ರಮುಖರು. ಪಟ್ಟಣಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಿಸಿದರು.

ಸೊರಬ ಪಟ್ಟಣ ಪಂಚಾಯಿತಿಯ ವಾರ್ಡ್ -1ರಲ್ಲಿ ಕಾಂಗ್ರೆಸ್‍ನ ಅಫ್ರೀನ್, ವಾರ್ಡ್-2ರಲ್ಲಿ ಬಿಜೆಪಿಯ ವೀರೇಶ್ ಮೇಸ್ತ್ರಿ, ವಾರ್ಡ್- 3ರಲ್ಲಿ ಬಿಜೆಪಿಯ ಎಂ.ಡಿ.ಉಮೇಶ್, ವಾರ್ಡ್-4 ರಲ್ಲಿ ಬಿಜೆಪಿಯ ಜಯಲಕ್ಷ್ಮೀ, ವಾರ್ಡ್-5ರಲ್ಲಿ ಬಿಜೆಪಿಯ ಮಧುರಾಯ್ ಜಿ.ಶೇಟ್, ವಾರ್ಡ್-6 ರಲ್ಲಿ ಜೆಡಿಎಸ್‍ನ ಪ್ರೇಮಾ, ವಾರ್ಡ್-7 ರಲ್ಲಿ ಬಿಜೆಪಿಯ ನಟರಾಜ್, ವಾರ್ಡ್-8ರಲ್ಲಿ ಕಾಂಗ್ರೆಸ್‍ ಪ್ರಸನ್ನ ಕುಮಾರ್ ಡಿ.ಎಸ್, ವಾರ್ಡ್-9 ರಲ್ಲಿ ಪಕ್ಷೇತರ ಅಭ್ಯರ್ಥಿ ಅನ್ಸರ್ ಅಹ್ಮದ್, ವಾರ್ಡ್-10ರಲ್ಲಿ ಕಾಂಗ್ರೆಸ್‍ನ ಸುಲ್ತಾನ ಬೇಗಂ, ವಾರ್ಡ್-11 ರಲ್ಲಿ ಕಾಂಗ್ರೆಸ್‍ನ ಶ್ರೀರಂಜನಿ, ವಾರ್ಡ್-12ರಲ್ಲಿ ಬಿಜೆಪಿಯ ಪ್ರಭು ಗೆಲುವು ಸಾಧಿಸಿದ್ದಾರೆ. ಒಟ್ಟು 12 ವಾರ್ಡುಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ- 6, ಕಾಂಗ್ರೆಸ್-ಜೆಡಿಎಸ್ ಮೈತ್ರಿ-5 ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ. ಪಕ್ಷೇತರ-ಒಬ್ಬ ಅಭ್ಯರ್ಥಿ ಗೆಲುವು ಪಡೆದಿದ್ದಾರೆ.

Comments are closed.