ನವದೆಹಲಿ: ಪ್ರಧಾನಿ ಮೋದಿ ಅವರ ಎರಡನೇ ಅವಧಿಯ ಸಚಿವ ಸಂಪುಟಕ್ಕೆ ಯಾರ್ಯಾರು ಸೇರ್ಪಡೆಯಾಗಲಿದ್ದಾರೆ ಈಗಾಗಲೇ ಪ್ರಕಟವಾಗಿದ್ದು, ರಾಜ್ಯದಲ್ಲಿ ನಾಲ್ವರಿಗೆ (ರಾಜ್ಯಸಭೆ ಸೇರಿ) ಮೊದಿ ಸಂಪುಟದಲ್ಲಿ ಅವಕಾಶ ದೊರಕಿದೆ. ಆದರೆ, ಯಡಿಯೂರಪ್ಪ ಹೇಳಿದ ಯಾವ ಹೆಸರಿಗೂ ಹೈಕಮಾಂಡ್ ಮಣೆ ಹಾಕಿಲ್ಲದಿರುವುದು ಯಡಿಯೂರಪ್ಪಗೆ ಭಾರೀ ಹಿನ್ನಡೆಯಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಬಿಎಸ್ ವೈ ವಿರೋಧಿ ಬಿ.ಎಲ್. ಸಂತೋಷ್ ಮೇಲುಗೈ ಸಾಧಿಸಿದ್ದಾರೆ.
ಆಪ್ತೆ ಶೋಭಾ ಕರಂದ್ಲಾಜೆಗೆ ಮಂತ್ರಿ ಸ್ಥಾನ ಕೊಡಿಸುವಲ್ಲಿ ಬಿಎಸ್ ವೈ ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೇ. ಬೆಂಬಲಿಗ ಪಿ.ಸಿ. ಗದ್ದೀಗೌಡರ್ ಗೆ ಮಂತ್ರಿ ಸ್ಥಾನ ಕೊಡಿಸುವಲ್ಲೂ ಸೋತಿದ್ದಾರೆ. ಉಮೇಶ್ ಜಾಧವ್ಗೆ ಮಂತ್ರಿ ಮಾಡುವ ಭರವಸೆಯನ್ನೂ ಬಿಎಸ್ವೈ ನೀಡಿದ್ದರು. ಆದರೆ, ಕೊಟ್ಟ ಮಾತು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ.
ಬಿಎಸ್ವೈ ವಿರೋಧಿಯಾಗಿರುವ ಸಂತೋಷ್ಗೆ ಮೇಲುಗೈ ಸಾಧಿಸಿದ್ದಾರೆ. ತಮ್ಮ ಶಿಷ್ಯರಾದ ಸುರೇಶ್ ಅಂಗಡಿ ಮತ್ತು ಪ್ರಹ್ಲಾದ್ ಜೋಶಿಗೆ ಮಂತ್ರಿ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೋಭಾ ಮಂತ್ರಿ ಆಗುವುದನ್ನು ಸಂತೋಷ್ ಅವರೇ ತಡೆದಿದ್ದಾರೆ ಎನ್ನಲಾಗುತ್ತಿದೆ. ಶೋಭಾಗೆ ತಡೆ ನೀಡಲು ಸದಾನಂದಗೌಡರಿಗೆ ಮಣೆ ಹಾಕಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.