ಕರ್ನಾಟಕ

ದಿಲ್ಲಿಯಲ್ಲೂ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹವಾ!

Pinterest LinkedIn Tumblr


ಬೆಂಗಳೂರು ದಕ್ಷಿಣ ಬಿಜೆಪಿ ಎಂಪಿ ತೇಜಸ್ವಿ ಸೂರ್ಯ ಉತ್ತಮ ವಾಗ್ಮಿ | ಇವರ ಇಂಗ್ಲೀಷ್ ಕೂಡಾ ಅಷ್ಟೇ ಅದ್ಭುತವಾಗಿದ್ದು ಇಂಗ್ಲೀಷ್ ಮಾಧ್ಯಮಗಳಿಗೆ ಅಚ್ಚುಮೆಚ್ಚು

ಅದೃಷ್ಟ ಅಂದರೆ 28 ವರ್ಷದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರದ್ದು. ಗೆದ್ದು ಬಂದ 4 ದಿನದಲ್ಲೇ ದಿಲ್ಲಿಯ ಆಂಗ್ಲ ಮಾಧ್ಯಮಗಳು ತೇಜಸ್ವಿ ಬೆನ್ನುಹತ್ತಿದ್ದು, ನಿರರ್ಗಳ ಭಾಷೆ ಬಳಸುವ ಮತ್ತು ಸ್ಫುರದ್ರೂಪಿ ಆಗಿರುವ ತೇಜಸ್ವಿ ಸೂರ್ಯರನ್ನು ತಮ್ಮ ತಮ್ಮ ಸ್ಟುಡಿಯೋಗಳಿಗೆ ಚರ್ಚೆಗೆ ಒಯ್ಯಲು ಹಾತೊರೆಯುತ್ತಿವೆ.

ದಕ್ಷಿಣದಿಂದ ಅಸ್ಖಲಿತ ಇಂಗ್ಲಿಷ್‌ ಮಾತನಾಡುವ ಬಿಜೆಪಿ ವಕ್ತಾರ ಒಬ್ಬ ದಿಲ್ಲಿ ಮಾಧ್ಯಮಗಳಿಗೆ ಬೇಕಿತ್ತು. ಆ ಶೂನ್ಯವನ್ನು ತೇಜಸ್ವಿ ತುಂಬಲಿದ್ದಾರೆ. ಇಲ್ಲವಾದರೆ ಬಹುತೇಕ ದಕ್ಷಿಣದ ನಾಯಕರಿಗೆ ಹಿಂದಿ ಕೂಡ ಹರಕುಮುರುಕು, ಇಂಗ್ಲಿಷ್‌ ಕೂಡ ಅಷ್ಟಕಷ್ಟೇ. ತೇಜಸ್ವಿಗೆ ಆ ಸಮಸ್ಯೆಯಿಲ್ಲ. ಆದರೆ ದಿಲ್ಲಿ ಆಂಗ್ಲ ಮಾಧ್ಯಮಗಳು ಎಷ್ಟುಬೇಗ ತಲೆ ಮೇಲೆ ಮೆರೆಸುತ್ತವೆಯೋ ಅಷ್ಟೇ ಬೇಗ ಬಿಸಾಕುತ್ತವೆ. ಆ ಬಗ್ಗೆ ಗಮನ ಇರುವುದು ಒಳ್ಳೆಯದು.

Comments are closed.