ಬೆಂಗಳೂರು: ಕರ್ನಾಟಕದ ಸಿಂಗಂ ಎಂದೇ ಖ್ಯಾತ ಪಡೆದಿದ್ದ ಖಡಕ್ ಐಪಿಎಸ್ ಅಧಿಕಾರಿ ಡಿಸಿಪಿ ಕೆ. ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿದ್ದ ಅಣ್ನಾಮಲೈ ಮಂಗಳವಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.ಇದರೊಡನೆ ಕಳೆದ ಹತ್ತು ವರ್ಷಗಳ ತಮ್ಮ ನಿಸ್ವಾರ್ಥ, ಪ್ರಾಮಾಣಿಕ ನಾಗರಿಕ ಸೇವೆಗೆ ಗುಡ್ ಬೈ ಹೇಳಿದ್ದಾರೆ.
ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಜಿಲ್ಲಾ ಪೋಲೀಸ್ ವರ್ಷ್ಟಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಅಲ್ಲಿ ಸಾಕಷ್ತು ಜನಪ್ರಿಯರಾಗಿದ್ದರು.
ತಮಿಳುನಾಡಿನ ಕರೂರು ಮೂಲದವರಾದ ಅಣ್ಣಾಮಲೈ 2011ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿ ಪೋಲೀಸ್ ಸೇವೆಗೆ ತೊಡಗಿದ್ದರು.
ತಮ್ಮ ರಾಜೀನಾಮೆಗೆ ಇದುವರೆಗೂ ನಿಖರ ಕಾರಣವನ್ನು ತಿಳಿಸದ ಅಣ್ನಾಮಲೈ ಮುಂದಿನ ಜೀವನದಲ್ಲಿ ತಮಿಳುನಾಡು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿದೆ. ಸಾಮಾಜ ಸೇವೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಉದ್ದೇಶದಿಂದ ಅಣ್ಣಾಮಲೈ ರಾಜಕೀಯಕ್ಕೆ ಸೇರಲಿದ್ದಾರೆ. ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.