ಕರ್ನಾಟಕ

ಅನೈತಿಕ ಸಂಬಂಧಕ್ಕೆ ಹತ್ಯೆ ಮಾಡಿದ್ದ ಆರೋಪಿ ಮೇಲೆ ಫೈರಿಂಗ್

Pinterest LinkedIn Tumblr


ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಪೊಲೀಸರು ಗನ್ ಸದ್ದು ಮಾಡುತ್ತಿದ್ದು, ಇದೀಗ ಕೊಲೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಆರೋಪಿ ಕಿಶೋರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬೆಂಗಳೂರಿನ ಪೀಣ್ಯ ಇಂಡಸ್ಟ್ರೀಯಲ್ ಬಳಿ ಈ ಘಟನೆ ನಡೆದಿದೆ. ರಾಜಗೋಪಾಲನಗರದಲ್ಲಿ ನಡೆದಿದ್ದ ಉಮೇಶ್ ಕೊಲೆ ಕೇಸ್‍ನಲ್ಲಿ ಆರೋಪಿ ಕಿಶೋರ್ ಬೇಕಾಗಿದ್ದನು.

ಏನಿದು ಪ್ರಕರಣ
ಆರೋಪಿ ಕಿಶೋರ್ ಕೊಲೆಯಾದ ಉಮೇಶ್ ಪತ್ನಿ ರೂಪ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇದು ಪತಿಗೆ ಗೊತ್ತಾಗುತ್ತಿದ್ದಂತೆ ಆರೋಪಿ ಕಿಶೋರ್ ಉಮೇಶ್ ಕೊಲೆ ಮಾಡಿಸಿದ್ದನು. ಈ ಕುರಿತು ದೂರು ದಾಖಲಿಸಿಕೊಂಡು ರಾಜಗೋಪಾಲನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇಂದು ಖಚಿತ ಮಾಹಿತಿ ಮೇರೆಗೆ ಆತನನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ.

ಈ ವೇಳೆ ರಾಜಗೋಪಾಲನಗರ ಇನ್ಸ್ ಪೆಕ್ಟರ್ ದಿನೇಶ್ ಪಾಟೀಲ್ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಪೇದೆ ಶಿವಸ್ವಾಮಿಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದನು. ಆಗ ಆತ್ಮರಕ್ಷಣೆಗಾಗಿ ಕಿಶೋರ್ ಕಾಲಿಗೆ ದಿನೇಶ್ ಪಾಟೀಲ್ ಗುಂಡು ಹಾರಿಸಿದ್ದಾರೆ.

ಸದ್ಯಕ್ಕೆ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Comments are closed.