ಬೆಂಗಳೂರು : ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನು ಮೂರು ದಿನ ಬಾಕಿಯಿರುವಾಗ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳು ಎನ್ಡಿಎ ಮೈತ್ರಿ ಕೂಟ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶದ ಹೊರ ಬೀಳುತ್ತಿದ್ದಂತೆ ಮತ್ತೊಮ್ಮೆ ಮತಯಂತ್ರಗಳ ಸಾಚಾತನದ ಬಗ್ಗೆ ವಿಪಕ್ಷಗಳು ಪ್ರಶ್ನಿಸಿವೆ.
ಮತಯಂತ್ರಗಳ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಧ್ವನಿ ಎತ್ತಿದ್ದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿದ್ದಾರೆ.
Entire Opposition political parties had expressed concern over credibility of EVMs under PM @narendramodi's rule.
Opposition parties even knocked the doors of the Supre Court asking for a traditional ballet paper elections to avoid defective EVMs that are vulnerable to fraud.
— H D Kumaraswamy (@hd_kumaraswamy) May 20, 2019
ದೇಶದಲ್ಲಿ ಮೋದಿ ಅಲೆ ಇದೆ ಎಂಬುದನ್ನು ಬಿಂಬಿಸಲು ಈ ಸಮೀಕ್ಷೆ ಮಾಡಲಾಗಿದೆ. ಮೇ 23ರ ಫಲಿತಾಂಶದ ನಂತರ ನೈಜ ಸ್ಥಿತಿ ಏನೆಂಬುದು ತಿಳಿಯಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇವಿಎಂ ವಿಶ್ವಾಸ ಕುರಿತು ಎಲ್ಲ ವಿಪಕ್ಷಗಳು ಪ್ರಶ್ನಿಸಿ ಧ್ವನಿ ಎತ್ತಿದ್ದವು. ಅಷ್ಟೇ ಅಲ್ಲದೆ ಈ ಕುರಿತು ವಿಪಕ್ಷಗಳು ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿ, ಚುನಾವಣೆಯಲ್ಲಿ ಇವಿಎಂ ಬಳಕೆ ರದ್ದು ಮಾಡುವಂತೆ ಕೋರಿದ್ದವು ಎಂದು ತಿಳಿಸಿದ್ದಾರೆ.
ಪ್ರಪಂಚದ ಅನೇಕ ಮುಂದುವರೆದ ರಾಷ್ಟ್ರಗಳು ಬ್ಯಾಲೆಟ್ ಪೇಪರ್ ಅನ್ನೇ ಅಳವಡಿಸಿಕೊಂಡಿದೆ. ಇವಿಎಂಗಳು ವಿಶ್ವಾಸನೀಯವಲ್ಲ ಎಂದು ಹೇಳಲಾಗಿದೆ ಎನ್ನುವ ಮೂಲಕ ಇವಿಎಂ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.
ಆಡಳಿತ ಪಕ್ಷ ತಮ್ಮ ಲಾಭಕ್ಕಾಗಿ ಇವಿಎಂಗಳನ್ನು ಬಳಸುವ ಸಾಧ್ಯತೆ ಬಗ್ಗೆ ವಿಪಕ್ಷಗಳು ಕಳವಳ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮೋದಿ ಅಲೆಯನ್ನು ಮೂಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನೂ ಮೋದಿ ಅಲೆಯಿದೆ ಎನ್ನಲು ಈ ಸಮೀಕ್ಷೆಗಳನ್ನು ನಡೆಸಿ ಬಿಜೆಪಿ ಪರ ಕೃತಕ ಅಲೆಯೆಬ್ಬಿಸಲು ಬಿಜೆಪಿ ಮುಂದಾಗಿದೆ. ಈ ಸಮೀಕ್ಷೆಗಳ ಹಿಂದೆ ಬಿಜೆಪಿ ಕೈವಾಡವಿದೆ. ಚುನಾವಣೋತ್ತರ ಸಮೀಕ್ಷೆಗಳು ಒಂದು ನಿರ್ದಿಷ್ಟ ವ್ಯಕ್ತಿ ಹಾಗೂ ಪಕ್ಷದ ಪರವಾಗಿ ಸುಳ್ಳು ಅಭಿಪ್ರಾಯ ಸೃಷ್ಟಿಸುವ ಪ್ರಯತ್ನವಾಗಿದೆ. ಇದು ಕೇವಲ ಸಮೀಕ್ಷೆ ಹೊರತು ಅಂತಿಮ ಫಲಿತಾಂಶವಲ್ಲ ಎಂದಿದ್ದಾರೆ.
ಬಿಜೆಪಿ ಶಾಸಕ ಸುರೇಶ್ ಕುಮಾರ್ ಟಾಂಗ್
ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸಿರುವ ಸಿಎಂ ಕುಮಾರಸ್ವಾಮಿ ಮಾತಿಗೆ ಟಾಂಗ್ ನೀಡಿರುವ ಬಿಜೆಪಿ ನಾಯಕ ಸುರೇಶ್ ಕುಮಾರ್, ಚುನಾವಣೋತ್ತರ ಸಮೀಕ್ಷೆಗೆ ಹೀಗೆ ಆಡಿದರೆ, ಫಲಿತಾಂಶದ ದಿನ ಇನ್ನು ಹೇಗೆ ನಿಮ್ಮ ಸ್ಥಿತಿ ಎಂದು ವ್ಯಂಗ್ಯವಾಡಿದ್ದಾರೆ.
ಈಗ್ಲೇ ಹೀಗಾಡುತ್ತಿರುವವರು 23 ರ ಸಂಜೆ ಇನ್ನು ಹ್ಯಾಗಾಡುತ್ತಾರೋ!
ಒಟ್ಟಿನಲ್ಲಿ EVM ಇವರಿಗೆ ರಾಜಕೀಯ Anticipatory Bail ತೆಗೆದುಕೊಳ್ಳಲು ನೆವ ಅಷ್ಟೇ!
ಅಥವಾ ಫಲಿತಾಂಶ ಬಂದಮೇಲೆ ಮಹಾಘಟಬಂಧನ್ ಪಕ್ಷಗಳದ್ದು ಇನ್ನೇನಾದರೂ ಪ್ರಜಾತಂತ್ರವಿರೋಧಿ ಯೋಜನೆ-ಕಾರ್ಯಕ್ರಮ ಇದೆಯೋ? pic.twitter.com/BnZWdeqmhp
— S.Suresh Kumar (@nimmasuresh) May 20, 2019
ಸತ್ಯವನ್ನು ಅರಗಿಸಿಕೊಳ್ಳಲಾಗದೆ ಈಗ ಇವಿಎಂ ಮೇಲೆ ತಮ್ಮ ಸೋಲಿನ ಹೊಣೆ ಕಟ್ಟುವ ಪ್ರಯತ್ನ ಇದಾಗಿದೆ. ಫಲಿತಾಂಶ ಮಹಾಘಟಬಂಧನ್ ಪಕ್ಷಗಳದ್ದು ಇನ್ನೇನಾದರೂ ಪ್ರಜಾತಂತ್ರವಿರೋಧಿ ಯೋಜನೆ-ಕಾರ್ಯಕ್ರಮ ಹಾಕಿಕೊಂಡು ಹೈಡ್ರಾಮಾ ಸೃಷ್ಟಿಸಲು ವಿಪಕ್ಷಗಳು ಮುಂದಾಗಿವೆ ಎಂದಿದ್ದಾರೆ.
Comments are closed.