ಕರ್ನಾಟಕ

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಮಳೆ

Pinterest LinkedIn Tumblr


ಬೆಂಗಳೂರು: ಉರಿ ಬಿಸಿಲಿಗೆ ಬೆಂದು ನೊಂದ ಹೋಗಿದ್ದ ಬೆಂಗಳೂರು ಮಂದಿಗೆ ವರುಣ ತಂಪೆರೆದಿದ್ದಾನೆ. ಕೆಲವಡೆ ಮಳೆರಾಯ ಸಂತಸ ಸಿಟಿ ಮಂದಿಗೆ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಇನ್ನೂ ಕೆಲವು ಕಡೆ ವರುಣ ಅವಾಂತರ ಸೃಷ್ಟಿಸಿದ್ದಾನೆ.

ಧಾರಾಕಾರ ಸುರಿದ ಹಲವು ಕಡೆಗಳಲ್ಲಿ ಬೃಹತ್ ಮರಗಳು ಧರೆಗೆ ಉರುಳಿ ಜನರಲ್ಲಿ ಆತಂಕ ಉಂಟಾಗುಂತೆ ಮಾಡಿದೆ. ಇನ್ನೂ ಜಯನಗರ, ವಿಲ್ಸನ್​ಗಾರ್ಡ್​ನ್, ಲುಂಬಿನಿ ಗಾರ್ಡ್​ನಲ್ಲಿ ದೊಡ್ಡ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಜಯನಗರದಲ್ಲಿ ನ್ಯಾನೋ ಕಾರ್​ ಮೇಲೆ ಬೃಹತ್ ಮರ ಬಿದ್ದ ಕಾರಣ ಕಾರು ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರು ಇರಲಿಲ್ಲ. ಮರಗಳು ಬಿದ್ದಿರುವ ದೂರು ಬಂದ ಕೂಡಲೇ ಪಾಲಿಕೆಯ ಅರಣ್ಯ ವಿಭಾಗದ ಸಿಬ್ಬಂದಿ ಬಿದ್ದಿರುವ ಮರಗಳುನ್ನು ತೆರವು ಮಾಡಿದರು. ಇನ್ನು ವರುಣನ ಅರ್ಭಟಕ್ಕೆ ಬಿಬಿಎಂಪಿ ಮತ್ತು ಬೆಸ್ಕಾಂಗೆ ಗಂಟೆಗೊಂದು ದೂರುಗಳು ಬರ್ತಿದೆ.

ಅಷ್ಟೇ ಅಲ್ಲ ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ಥ ಗೊಂಡಿದೆ. ಸುಮಾರು ಗಂಟೆಗಳ ಕಾಲ ಸುರಿದ ಮಳೆಗೆ ನಗರದ ಜನತೆ ಹರ್ಷ ವ್ಯಕ್ತಪಡಿಸಿದ್ರು. ಅಲ್ಲದೆ ಆಲಿಕಲ್ಲು ಮಳೆಯಾಗಿರುವುದಕ್ಕೆ ಸಿಟಿ ಮಂದಿ ಫುಲ್ ಖುಷ್ ಆಗಿದ್ರು. ಇನ್ನೂ ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಭಾರಿ ಟ್ರಾಪಿಕ್​ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುಂತಾಯ್ತು.

ಇನ್ನು ನಗರದ ಹೊರವಲಯ ನೆಲಮಂಗಲದಲ್ಲಿ ಸುರಿದ ಭಾರೀ ಮಳೆಗೆ ಜನಜೀವನದ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಗಣೇಶ್ ರಾವ್ ಅವರ ಮನೆ ಮೇಲೆ ಬೃಹತ್ ಗಾಳಿ ಮಳೆಗೆ ಮರವೊಂದು ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Comments are closed.