ಕರ್ನಾಟಕ

ರಾಷ್ಟ್ರ ರಾಜಕಾರಣಕ್ಕೆ ಕುಮಾರಸ್ವಾಮಿಯ ಒಂದು ಯೋಜನೆ!

Pinterest LinkedIn Tumblr


ಮಡಿಕೇರಿಯ ಇಬ್ಬನಿ ರೆಸಾರ್ಟ್​ನಲ್ಲಿ ಸಿಎಂ ಕುಮಾರಸ್ವಾಮಿ ಅವರು ಎರಡು ದಿನ ರಹಸ್ಯ ವಾಸ್ತವ್ಯ ಮಾಡಿದ್ದೇಕೆ? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮುಖ್ಯಮಂತ್ರಿಗಳು ತಮ್ಮ ಆಪ್ತರೊಂದಿಗಿನ ರಹಸ್ಯ ಸಭೆಯಲ್ಲಿ ಭವಿಷ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದರೆನ್ನಲಾಗಿದೆ. ಒಂದೇ ಕಲ್ಲಿಗೆ ಎರಡು ಹಕ್ಕಿ, ಮೂರು ಲಾಭ ತರುವ ಸಖತ್ ಪ್ಲಾನ್ ರೂಪಿಸಲಾಗಿದೆ. ಲೋಕಸಭೆ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಅತಂತ್ರ ಲೋಕಸಭೆ ನಿರ್ಮಾಣವಾಗುವ ಸೂಚನೆ ಇದೆ. ಈ ವೇಳೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಮಹಾಘಟಬಂಧನ್ ಮುಖ್ಯ ಪಾತ್ರವಹಸಿಲಿದೆ. ಆಗ ಗೇಮ್ ಆಡುವುದು ಮೊದಲ ಅಜೆಂಡಾ. ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇವೇಗೌಡರೂ ಸೂತ್ರಧಾರರಾಗುತ್ತಾರೆ. ಹೀಗಾದರೂ ಮಾಡಿ ಅಪ್ಪನ ಮೂಲಕ ಕೇಂದ್ರದಲ್ಲಿ ಪ್ರಬಲ ಖಾತೆ ಗಿಟ್ಟಿಸಬಹುದು ಎಂಬುದು ಸಿಎಂ ಕುಮಾರಸ್ವಾಮಿ ಲೆಕ್ಕಚ್ಚಾರ.

ಶಿವಳ್ಳಿಗೆ 25 ಕೋಟಿ ಆಫರ್ ನೀಡಿತ್ತು ಬಿಜೆಪಿ: ಮಾಜಿ ಸಿದ್ದರಾಮಯ್ಯ

ಬಿಜೆಪಿ ಶಿವಳ್ಳಿಗೂ 25 ಕೋಟಿ ಆಫರ್​​ ನೀಡಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಮತ್ತೊಂದು ಬಾಂಬ್​​ ಸಿಡಿಸಿದ್ದಾರೆ. ಡಾ. ಉಮೇಶ್​ ಜಾಧವ್ ಬಿಜೆಪಿಗೆ ಮಾರಾಟವಾಗಿದ್ದಾರೆ. ಶಿವಳ್ಳಿಗೂ ಬಿಜೆಪಿ 25 ಕೋಟಿ ಹಣಕ್ಕೆ ಬೆಲೆ ಕಟ್ಟಿದ್ದರು. ಈ ವಿಚಾರನ್ನು ಶಿವಳ್ಳಿಯೇ ಖುದ್ದು ಫೋನ್ ಮೂಲಕ ತಿಳಿಸಿದ್ದರು. ಪ್ರಜಾಪ್ರಭುತ್ವ ಉಳಿಯಬೇಕು ಅಂದ್ರೆ ಪಕ್ಷಕ್ಕೆ ಬದ್ಧರಾಗಿ ಚುನಾಯಿತವಾದ ಪಕ್ಷಕ್ಕೆ ನಿಷ್ಠಾವಂತರಾಗಿಬೇಕು ಎಂಬುದರಲ್ಲಿ ಶಿವಳ್ಳಿ ನಂಬಿಕೆ ಇರಿಸಿದ್ದರು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬಂಗಾಳದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಕೊನೆಯದೊಂದು ಹಂತದ ಮತದಾನ ಬಾಕಿ ಇರುವಂತೆಯೇ ಚುನಾವಣಾ ಆಯೋಗ ಇವತ್ತು ಅಚ್ಚರಿಯ ನಿರ್ಧಾರ ಪ್ರಕಟಿಸಿದೆ. ಪಶ್ಚಿಮ ಬಂಗಾಳದಲ್ಲಿ ಅವಧಿಗೆ ಒಂದು ಮೊದಲೇ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲು ನಿರ್ಧರಿಸಿದೆ. ಇಂದು, ಅಂದರೆ ಮೇ 16 ರಾತ್ರಿ 10 ಗಂಟೆಯವರೆಗೆ ಮಾತ್ರ ಬಹಿರಂಗ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ. ಆ ನಂತರ ಪಶ್ಚಿಮ ಬಂಗಾಳದ 9 ಕ್ಷೇತ್ರಗಳಲ್ಲಿ ಯಾವುದೇ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಸಂವಿಧಾನದ 324ನೇ ವಿಧಿಯ ಅಧಿಕಾರ ಉಪಯೋಗಿಸಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ. ಭಾರತದ ಚುನಾವಣೆ ಇತಿಹಾಸದಲ್ಲಿ ಸಂವಿಧಾನದ ಈ ವಿಶೇಷಾಧಿಕಾರ ಉಪಯೋಗಿಸಿ ಆಯೋಗವು ಬಹಿರಂಗ ಪ್ರಚಾರಕ್ಕೆ ನಿಷೇಧ ಹೇರಿದ್ದು ಇದೇ ಮೊದಲಾಗಿದೆ.

ಪ್ರಜ್ವಲ್ ರೇವಣ್ಣಗೆ 6 ವರ್ಷ ನಿರ್ಬಂಧ?

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮೊಮ್ಮಗ ಹಾಗೂ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಗೆ ಸಂಕಷ್ಟ ಎದುರಾಗಿದೆ. ಚುನಾವಣೆಗೆ ಸ್ಪರ್ಧಿಸುವಾಗ ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಎ. ಮಂಜು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದೀಗ ಪ್ರಜ್ವಲ್ ರೇವಣ್ಣ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗವು ಹಾಸನ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ‌. ಪ್ರಜಾಪ್ರತಿನಿಧಿ ಕಾಯ್ದೆ 125 ಎ ರ ಮತ್ತು 1951 ರ ಅಡಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಕಾಯ್ದೆ ಪ್ರಕಾರ ಪ್ರಜ್ವಲ್ ಅವರಿಗೆ ದಂಡ ವಿಧಿಸಬಹುದು ಅಥವಾ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಬಹುದು ಎನ್ನಲಾಗಿದೆ.

ಬಿಎಸ್​​ವೈ ವಿರುದ್ಧ ಆಯೋಗಕ್ಕೆ ದೂರು

ಕಾಂಗ್ರೆಸ್​ಗೆ ಲಿಂಗಾಯತರು ಮತ ಹಾಕುವುದು ಮಹಾ ಅಪರಾಧ ಎಂದಿದ್ದ ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪನವರ ವಿರುದ್ಧ ದೂರು ನೀಡಲಾಗಿದೆ. ಕಾಂಗ್ರೆಸ್​ ನಾಯಕರೇ ಖುದ್ದು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದು, ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಮತ ಹಾಕಬೇಡಿ ಎಂದು ದುರುದ್ದೇಶಪೂರಿತ ಹೇಳಿಕೆ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

Comments are closed.