ಕರ್ನಾಟಕ

ಲವ್ ಮ್ಯಾರೇಜ್ ಆಗಿದ್ದ ಮಹಿಳಾ ಸಾಫ್ಟ್​​ವೇರ್​ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

Pinterest LinkedIn Tumblr


ಬೆಂಗಳೂರು: ನೇಣು ಬಿಗಿದುಕೊಂಡು ಮಹಿಳಾ ಸಾಫ್ಟವೇರ್​ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜೆ.ಪಿ.ನಗರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಸುಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಅಕ್ಷಯ್​ ಎಂಬಾತನ್ನು ಪ್ರೀತಿಸುತ್ತಿದ್ದ ಸುಪ್ರಿಯಾ ಕಳೆದ ನಾಲ್ಕು ವರ್ಷಗಳ ಹಿಂದೆ ಆತನೊಂದಿಗೆ ವಿವಾಹವಾಗಿದ್ದರು. ಗಂಡ-ಹೆಂಡತಿ ಇಬ್ಬರು ಸಹ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೇ ಇಬ್ಬರು ಸೇರಿ ಮಗುವಿನ ನಾಮಕರಣ ಮಾಡಿದ್ದರು. ಒಂದು ವರ್ಷದ ಮಗು ಬಿಟ್ಟು ರಾತ್ರಿ ಮನೆಯಲ್ಲಿ ಸುಪ್ರಿಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೃತ ಸುಪ್ರಿಯಾ ಕುಟುಂಬದವರು ಅಕ್ಷಯ್​ ವಿರುದ್ಧ ದೂರಿದ್ದು, ಆತ ಸುಪ್ರಿಯಾಳಿಗೆ ವರದಕ್ಷಿಣೆ ವಿಚಾರವಾಗಿ ಸಾಕಷ್ಟು ಕಿರುಕುಳ ನೀಡುತ್ತಿದ್ದ. ಅಲ್ಲದೆ, ಅಕ್ಷಯ್​ಗೆ ಬೇರೆ ಕಡೆಯೂ ಸಹ ಹುಡುಗಿಯರ ಜತೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.