ಬೆಂಗಳೂರು: ರಾಜ್ಯ ಸರ್ಕಾರ ಇಲ್ಲಿಯತನಕ ಮಾಡಿರುವ ರೈತರ ಸಾಲಮನ್ನಾ ವಿವರವನ್ನು ಮಾಧ್ಯಮ ಪ್ರಕಟಣೆ ಮೂಲಕ ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದೆ.
ಕರ್ಮಷಿಯಲ್ ಬ್ಯಾಂಕ್ನ ಕ್ರಾಪ್ ಲೋನ್ ಮೊತ್ತ 7.49ಲಕ್ಷ ರೂಪಾಯಿ (7,49,091) ಫಲಾನುಭವಿ ರೈತರಿಗೆ ನೀಡಿದ ಒಟ್ಟು ಮೊತ್ತ 3,929 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 1.5 (1,50,000)ಲಕ್ಷ ರೈತರಿಗೆ 900 ಕೋಟಿ ಹಣ ಇದೇ ತಿಂಗಳ 23ರ ನಂತರ ಬಿಡುಗಡೆ ಆಗಲಿದೆ.
ಸೊಸೈಟಿಗಳ ಕ್ರಾಪ್ ಲೋನ್ ವಿವರ ಇಂತಿದೆ ಒಟ್ಟು ಮೊತ್ತ 8.1(810,000)ಲಕ್ಷ ಫಲಾನುಭವಿ ರೈತರಿಗೆ 3,488 ಕೋಟಿ ರೂಪಾಯಿಗಳು ಏಪ್ರಿಲ್ ತಿಂಗಳ ತನಕ ಬಿಡುಗಡೆ ಮಾಡಲಾಗಿದೆ. ಒಟ್ಟು ಕಮರ್ಷಿಯಲ್ ಮತ್ತು ಸೊಸೈಟಿಯ ಸಾಲಮನ್ನಕ್ಕಾಗಿ 15.5(1,550, 000)ಲಕ್ಷ ಫಲಾನುಭವಿ ರೈತರು 7,417 ಕೋಟಿ ರೂಪಾಯಿ ಬಿಡುಗಡೆ ಆಗಿದೆ.
ರಾಜ್ಯ ಸರ್ಕಾರ ಇಲ್ಲಿಯತನಕ ಸಾಲಮನ್ನಾ ಮಾಡಿರುವ ಅಂಕಿ-ಅಂಶಗಳನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಮೂಲಕ ಪ್ರಕಟಣೆ ಮಾಡಿದೆ.