ಕರ್ನಾಟಕ

ಲೋಕಸಭಾ ಚುನಾವಣೆ: ಬಿರುಸುಗೊಂಡ ಮತದಾನ; ಕರ್ನಾಟಕದಲ್ಲಿ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇ.39.87 ರಷ್ಟು ಮತದಾನ!

Pinterest LinkedIn Tumblr

ಬೆಳಗಾವಿ: ಲೋಕಸಭಾ ಚುನಾವಣೆಯ ನಿಮಿತ್ತ ಕರ್ನಾಟಕದಲ್ಲಿ ನಡೆಯುತ್ತಿರುವ 2ನೇ ಹಂತದ ಮತದಾನ ಮಧ್ಯಾಹ್ನ ವೇಳೆಗೆ ಬಿರುಸುಗೊಂಡಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ39.87ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ತನ್ನ ವೆಬ್ ಸೈಟಿನಲ್ಲಿ ಮಾಹಿತಿ ನೀಡಿದ್ದು, ಚಿಕ್ಕೋಡಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಬೆಳಗಿನಿಂದಲೇ ಮತದಾರರು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಇನ್ನು ಇಂದು ಮತದಾನ ನಡೆಯುತ್ತಿರುವ ಎಲ್ಲ 14 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.39.87ರಷ್ಟು ಮತದಾನವಾಗಿದೆ. ಈ ಪೈಕಿ ಚಿಕ್ಕೋಡಿಯಲ್ಲಿ ಶೇ. 41.05, ಬೆಳಗಾವಿಯಲ್ಲಿ ಶೇ.3.02, ಬಾಗಲಕೋಟೆಯಲ್ಲಿ 38.33, ವಿಜಯಪುರದಲ್ಲಿ ಶೇ.33.14, ಗುಲ್ಬರ್ಗಾದಲ್ಲಿ ಶೇ.30.48, ರಾಯಚೂರಿನಲ್ಲಿ ಶೇ.35.57, ಬೀದರ್ ನಲ್ಲಿ ಶೇ.33.39, ಕೋಪ್ಪಳದಲ್ಲಿ ಶೇ.39.43, ಬಳ್ಳಾರಿ 40.22ರಷ್ಟು ಮತದಾನವಾಗಿದೆ.
ಅಂತೆಯೇ ಹಾವೇರಿ ಶೇ.32.79ರಷ್ಚು, ಧಾರವಾಡದಲ್ಲಿ ಶೇ. 35.79ರಷ್ಚು, ಉತ್ತರ ಕನ್ನಡದಲ್ಲಿ ಶೇ.39.87ರಷ್ಟು. ದಾವಣಗೆರೆಯಲ್ಲಿ 37.59ರಷ್ಟು ಮತ್ತು ಶಿವಮೊಗ್ಗದಲ್ಲಿ ಶೇ.41.66ರಷ್ಟು ಮತದಾನವಾಗಿದೆ.

Comments are closed.