ಕರ್ನಾಟಕ

ಮುಖ ಸರಿ ಇಲ್ಲವೆಂದು ಹೆಂಡತಿಯೇ ಮೋದಿಯನ್ನು ಬಿಟ್ಟಿದ್ದಾರೆ, ಈಗ ಅವರ ಮುಖ ನೋಡಿ ಮತ ನೀಡಬೇಕೇ?: ಜಮೀರ್

Pinterest LinkedIn Tumblr


ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ತಮಗೆ ಮತ ನೀಡಿ ಎಂದು ರಾಜ್ಯ ಬಿಜೆಪಿ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಮೋದಿ ಮುಖ ಸರಿ ಇಲ್ಲದ್ದಕ್ಕೆ ಪತ್ನಿಯೇ ಅವರನ್ನು ಬಿಟ್ಟಿದ್ದಾರೆ. ಈಗ ಪತ್ನಿ ಬಿಟ್ಟವರ ಮುಖ ನೋಡಿ ನಾವು ಮತ ನೀಡಬೇಕೇ ಎಂದು ಸಚಿವ ಜಮೀರ್ ಅಹ್ಮದ್‍ಖಾನ್ ಪ್ರಶ್ನೆ ಮಾಡಿದ್ದಾರೆ.

ಹಾವೇರಿಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ನನ್ನ ಮುಖ ನೋಡಿ ಬೇಡಿ, ಮೋದಿ ಮುಖ ನೋಡಿ ಮತ ನೀಡಿ ಎಂದು ಪ್ರಚಾರ ನಡೆಸುತ್ತಾರೆ. ಅದ್ದರಿಂದ ಅವರು ಬುರ್ಖಾ ಧರಿಸಿ ಪ್ರಚಾರ ನಡೆಸುವುದು ಉತ್ತಮ. ಅಲ್ಲದೇ ಹೆಂಡತಿ ಮುಖ ಸರಿ ಎಂದು ಮೋದಿ ಅವರನ್ನು ಬಿಟ್ಟಿದ್ದಾರೆ. ಅವರ ಮುಖ ನೋಡಿ ನಾವು ಮತ ಹಾಕಬೇಕಾ? ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳಬೇಡಿ. ನಿಮ್ಮ ಸಾಧನೆ ಹೇಳಿಕೊಂಡು ಮತ ಕೇಳಿ ಎಂದರು.

ಇದೇ ವೇಳೆ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಅವರಿಗೆ ಟಾಂಗ್ ನೀಡಿದ ಜಮೀರ್, ಐದು ವರ್ಷ ಕ್ಷೇತ್ರದ ಎಂಪಿ ಆಗಿದ್ದ ನಿಮ್ಮ ಸಾಧನೆ ಶೂನ್ಯ. ನಿಮ್ಮ ಮುಖ ನೋಡ ಬೇಡಿ ಅಂದರೆ ಬುರ್ಖಾ ಹಾಕಿಕೊಂಡು ಬನ್ನಿ. ಹೊಸ ಬುರ್ಖಾ ನಾನೇ ನೀಡುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯರೇ ನಮ್ಮ ಮುಖ್ಯಮಂತ್ರಿ. ಕುಮಾರಸ್ವಾಮಿ ಐದು ವರ್ಷ ಸಿಎಂ ಆಗಿರುತ್ತಾರೆ. ಬಿಜೆಪಿಯವರು ಸರ್ಕಾರ ರಚನೆಗೆ ಪ್ರಯತ್ನ ಮಾಡುತ್ತಿದ್ದು, ಅದು ಯಾವ ಕಾರಣಕ್ಕೂ ಯಶಸ್ವಿ ಆಗಲ್ಲ. ಅಲ್ಲದೇ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Comments are closed.