ಕರ್ನಾಟಕ

ಅಂಬರೀಷ್ ಕನ್ನಡಕ್ಕಾಗಿ ಮಾಡಿರುವ ಕೆಲಸ ನಿಮಗೇ ಗೊತ್ತಿದೆಯಲ್ಲಾ….? ಸುಮಲತಾರನ್ನು ಬೆಂಬಲಿಸುವಂತೆ ಪ್ರಧಾನಿ ಮೋದಿ ಕರೆ

Pinterest LinkedIn Tumblr

ಮೈಸೂರು: ನಿಮ್ಮ ಮತ ನಮ್ಮ ಜೊತೆಗಿರುವವರಿಗೆ ಬಲ ತುಂಬಬೇಕು, ಅಂಬರೀಷ್ ಕನ್ನಡಕ್ಕಾಗಿ ಮಾಡಿರುವ ಕೆಲಸ ನಿಮಗೇ ಗೊತ್ತಿದೆಯಲ್ಲಾ….? ಎಂದು ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನೆರೆದಿದ್ದ ಅಪಾರ ಕಾರ್ಯಕರ್ತರನ್ನುದ್ದೇಶಿಸಿ ಪ್ರಚಾರ ಭಾಷಣ ಮಾಡಿದ ಮೋದಿ, ಅಂಬರೀಷ್ ಮತ್ತು ಸುಮಲತಾ ಅಂಬರೀಷ್ ಅವರ ಹೆಸರು ಹೇಳುತ್ತಿದ್ದಂತೆ ಹರ್ಷೋದ್ಗಾರ ಮೊಳಗಿತು.

” ಕರ್ನಾಟಕ ಹಾಗೂ ದೇಶಕ್ಕೆ ಬಹುದೊಡ್ಡ ನಾಯಕತ್ವ ನೀಡಿದ ಶ್ರೇಯಸ್ಸು ರಾಜ್ಯದ ಜನರಿಗೆ ಸಲ್ಲುತ್ತದೆ. ಅಂತಹ ಸಾಲಿನಲ್ಲಿ ಅಂಬರೀಷ್ ಮತ್ತು ಸುಮಲತಾ ಅಂಬರೀಷ್ ಅವರು ಸಹ ಸೇರುತ್ತಾರೆ” ಎಂದರು. ಅಂಬರೀಷ್ ಅವರು ಈ ಜನರ ಹೃದಯಲ್ಲಿ ನೆಲೆಸಿದ್ದು, ಸುಮಲತಾ ಅವರ ಜತೆ ಸೇರಿ ಕನ್ನಡ ಭಾಷೆ, ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಇಂತಹ ಮಹನೀಯರ ಪ್ರಯತ್ನವನ್ನು ಶಸಕ್ತಗೊಳಿಸಬೇಕಾಗಿದೆ. ನಿಮ್ಮ ಮತ ನಮ್ಮ ಸಾಥಿಗಳಿಗೆ ಬಲ ಹೀಗಾಗಿ ಅವರಿಗೆ ಆಶಿರ್ವಾದ ಮಾಡುವಂತೆ ಕರೆ ನೀಡಿದರು.

ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಮತ್ತು ನಿಖಿಲ್ ಕುಮಾರ ಸ್ವಾಮಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಸುಮಲತಾ ಅಂಬರೀಷ್ ಅವರನ್ನು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಅಧಿಕೃತವಾಗಿ ಬೆಂಬಲಿಸಿದೆ.

ಅವರ ನಾಯಕನೇ ಪಲಾಯನ ಮಾಡಿದರೆ ಪಕ್ಷದ ಸ್ಥಿತಿ ಹೇಗಿರಬಹುದು?
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನ ಅಧ್ಯಕ್ಷ ರಾಹುಲ್ ಗಾಂಧಿ ಸುರಕ್ಷಿತ ಪ್ರದೇಶ ಹುಡುಕಿಕೊಂಡು ಕೇರಳಕ್ಕೆ ಪಲಾಯನ ಮಾಡಿದ್ದಾರೆ. ಅವರ ನಾಯಕನೇ ಪಲಾಯನ ಮಾಡಿದರೆ ಅವರ ಪಕ್ಷದ ಸ್ಥಿತಿ ಹೇಗಿರಬಹುದು ಎಂದು ಮೋದಿ ಪ್ರಶ್ನಿಸಿದ್ದಾರೆ.

ಪಕ್ಷದ ನಾಯಕನೇ ಪಲಾಯನ ಮಾಡಿರುವುದು ಏನನ್ನು ಸೂಚಿಸುತ್ತದೆ ಎಂಬ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

Comments are closed.