ಕರ್ನಾಟಕ

ನಾಳೆ ನಿಖಿಲ್​​ ಕುಮಾರಸ್ವಾಮಿ ನಾಮಪತ್ರ!

Pinterest LinkedIn Tumblr


ಮಂಡ್ಯ: ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್ ವಿರುದ್ಧ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸೋಮವಾರ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮುನ್ನ ಬೃಹತ್ ರ‍್ಯಾಲಿ ನಡೆಸಲಿದ್ದು, ಸುಮಲತಾರ ವಿರುದ್ಧ ದಂಡಯಾತ್ರೆ ನಡೆಸಲು ಜೆಡಿಎಸ್​​​ ಮುಂದಾಗಿದೆ. ಹಾಗೆಯೇ ಸುಮಲತಾ ಅವರು ನಾಮಪತ್ರಕ್ಕೆ ಸೇರಿಸಿದ್ದ ಜನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಜೆಡಿಎಸ್​​ ತನ್ನ ತಾಕತ್ತು ಪ್ರದರ್ಶಿಸಲಿದೆ ಎನ್ನಲಾಗಿದೆ.

ಈ ಸಮಾವೇಶದ ಪೂರ್ವ ಸಿದ್ಧತೆ ಬಗ್ಗೆ ಚರ್ಚಿಸಲು ಇಂದು ಸಿಎಂ ಎಚ್​​.ಡಿ ಕುಮಾರಸ್ವಾಮಿ ಅವರು ಮಂಡ್ಯ ಪ್ರಮುಖರ ಸಭೆ ಕರೆದಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​​ವೊಂದರಲ್ಲಿ ರಾತ್ರಿ ಹೊತ್ತಿಗೆ ಸಭೆ ನಡೆಯಲಿದೆ. ಇಲ್ಲಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್​​.ಪುಟ್ಟರಾಜು ಸೇರಿದಂತೆ ಸಚಿವ ಸಾ.ರಾ.ಮಹೇಶ್​, ಜಿಲ್ಲೆಯ ಏಳು ಶಾಸಕರು, ಮೂವರು ಎಂಎಲ್​​ಸಿ, ಪದಾಧಿಕಾರಿಗಳು, ಸ್ಥಳೀಯ ಜೆಡಿಎಸ್​​ ಮುಖಂಡರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಮಪತ್ರ ಸಲ್ಲಿಕೆಗೆ ಮುನ್ನವೇ ನಡೆಯಲಿರುವ ಸಮಾವೇಶಕ್ಕೆ 2 ಲಕ್ಷ ಜನರನ್ನು ಕರೆತರುವ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ ಜನರನ್ನು ಹೇಗೆ ಸೇರಿಸಬೇಕೆಂದು? ಜೆಡಿಎಸ್​ ಶಾಸಕರ ಜತೆ ಚರ್ಚಿಸಲು ಸಿಎಂ ಎಚ್​​.ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕನಿಷ್ಠ 15 ಸಾವಿರಕ್ಕೂ ಹೆಚ್ಚು ಜನರನ್ನು ಕರೆತರಬೇಕು ಎಂದು ಖಡಕ್​ ಸೂಚನೆ ನೀಡಲಿದ್ದಾರೆ.

ಇದೇ ವಿಚಾರವಾಗಿಯೇ ಇಂದು ಸಿಎಂ ಸಭೆ ನಡೆಸಲಿದ್ದಾರೆ. ಈ ಮೂಲಕ ಸುಮಲತಾ ಅಂಬರೀಷ್​ ನಡೆಸಿದ ಸಮಾವೇಶಕ್ಕೆ ಟಕ್ಕರ್​​ ಕೊಡಲು ಜೆಡಿಎಸ್​ ಮುಂದಾಗಿದ್ದಾರೆ. ಸುಮಲತಾ ಸಮಾವೇಶಕ್ಕೆ ಸೇರಿದ್ದ ಜನರಿಗಿಂತ ಹೆಚ್ಚು ಜನರನ್ನು ಸೇರಿಸಲು ಜೆಡಿಎಸ್​ ನಾಯಕರು ಸರ್ಕಸ್​​ ತಯಾರಿ ನಡೆಸಿಕೊಳ್ಳುತ್ತಿದ್ಧಾರೆ. ಒಂದು ವೇಳೆ ಅಂದಿನ ಸಮಾವೇಶಕ್ಕೆ ಕಡಿಮೆ ಜನ ಬಂದಲ್ಲಿ ಸಿಎಂಗೆ ಮುಖಭಂಗ ಆಗುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸರಿಯಾಗಿ ಪೂರ್ವ ತಯಾರಿ ನಡೆಸಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.

Comments are closed.