ಕರ್ನಾಟಕ

ಬೆಳಗಾವಿ ತಾಲೂಕಿನ ಧಾಮಣೆಯಲ್ಲಿ ದುಷ್ಕರ್ಮಿಳಿಂದ ಗುಂಡಿನ ದಾಳಿ; ಮಾಜಿ ಶಾಸಕನ ಪುತ್ರ ಅರುಣ್ ನಂದಿಹಳ್ಳಿ ಹತ್ಯೆ!

Pinterest LinkedIn Tumblr

ಬೆಳಗಾವಿ: ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಾಜಿ ಶಾಸಕನ ಪುತ್ರ ಕೊಲೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಧಾಮಣೆ ಎಂಬಲ್ಲಿ ನಡೆದ ಘಟನೆಯಲ್ಲಿ ವಡಗಾವಿಯ ನಿವಾಸಿ ಅರುಣ ನಂದಿಹಳ್ಳಿ ಎಂಬಾತ ಕೊಲೆಯಾಗಿದ್ದಾನೆ.

ಮಾಜಿ ಶಾಸಕ ಪರಶುರಾಮ ಬಾವು ಅವರ ಪುತ್ರ ಅರುಣ ಮಂಗಳವಾರ ತಡರಾತ್ರಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಆತನ ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಒಟ್ಟು ಐದರಿಂದ ಆರು ಮಂದಿಯ ತಂಡ ಈ ಕೃತ್ಯ ನಡೆಸಿದ್ದು ಕೊಲೆ ಬಳಿಕ ತಂಡವು ಪರಾರಿಯಾಗಿದೆ.

ಘಟನೆಗೆ ಹಣಕಾಸಿನ ವ್ಯವಹಾರ ಕಾರಣವಾಗಿದೆ ಎಂದು ಪೋಲೀಸರು ಪ್ರಾಥಮಿಕ ತನಿಖೆ ವೇಳೆ ಬಹಿರಂಗಪಡಿಸಿದ್ದಾರೆ. ಮೃತ ಅರುಣ ತಾನು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಇದ್ದ್ದು ಆದರೆ ಕೊಟ್ಟ ಹಣಕ್ಕೆ ಕೆಲಸ ಮಾಡಿಕೊಡದ ಕಾರಣ ಹಣವನ್ನು ಹಿಂತಿರುಗಿಸಲು ಹೇಳಲಾಗಿತ್ತು. ಇದೇ ವಿಚಾರದಲ್ಲಿ ಗಳಾಟ್ಗಳಾಗಿತ್ತು ಎಂದು ಪೋಲೀಸರು ಹೇಳಿದ್ದು ನಿನ್ನೆ ರಾತ್ರಿ ಸಹ ಹಂತಕರು ಅರುಣನ ಹತ್ಯೆ ನಡೆಸಲು ಇದೇ ಕಾರಣವಿದೆ ಎಂದು ಪೋಲೀಸರು ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.