ಕರ್ನಾಟಕ

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ನನ್ನ ಕನಸು: ಬಿಜೆಪಿ ಸೇರ್ಪಡೆ ನಂತರ ಉಮೇಶ್ ಜಾಧವ್

Pinterest LinkedIn Tumblr

ಕಲಬುರಗಿ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ನನ್ನ ಕನಸು, ನನಗೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದೇನೆ, ಬಿಜೆಪಿ ಪಕ್ಷ ನನ್ನನ್ನು ಒಳ್ಳೆಯ ರೀತಿಯಲ್ಲಿ ಬರಮಾಡಿಕೊಂಡಿದ್ದಾರೆ, ಬಹಳ ಸಂತೋಷದಿಂದ ಬಿಜೆಪಿ ಸೇರಿದ್ದೇನೆ ಎಂದು ಬಿಜೆಪಿ ಸೇರಿರುವ ಉಮೇಶ್ ಜಾಧವ್ ಪ್ರತಿಕ್ರಿಯಿಸಿದ್ದಾರೆ.

ಕಲಬುರಗಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಪಕ್ಷದ ಚಿಹ್ನೆಯುಳ್ಳ ಶಾಲು ಹೊದಿಸಿ, ಹಾರ ಹಾಕಿ ಜಾಧವ್ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ, ಕಲಬುರಗಿ ಸಮಾವೇಶಕ್ಕೆ ತೆರಳಲು ಬೀದರ್‌ ಏರ್‌ಬೇಸ್‌ಗೆ ಆಗಮಿಸಿದ್ದಾರೆ. ಬೆಳಿಗ್ಗೆ 11 ಗಂಟೆ ವೇಳೆಗೆ ಅವರು ಬೀದರ್‌ ತಲುಪಿದ್ದು, ರಾಜ್ಯಪಾಲ ವಜೂಬಾಯ್‌ ವಾಲಾ ಪ್ರಧಾನಿಯನ್ನು ಸ್ವಾಗತಿಸಿ ಬರಮಾಡಿಕೊಂಡರು. ಬೀದರ್‌ನಿಂದ ಹೆಲಿಕಾಫ್ಟರ್‌ ಮೂಲಕ ಕಲಬುರುಗಿಗೆ ಪ್ರಧಾನಿ ಆಗಮಿಸಿದ್ದಾರೆ.

ಕಲಬುರುಗಿಯಲ್ಲಿ ಆಯುಷ್ಮಾನ್‌ ಭಾರತ್‌ ಫಲಾನುಭವಿಗಳೊಂದಿಗೆ ಸಮಾಲೋಚನೆ ನಡೆಸಲಿರುವ ಪ್ರಧಾನಿ, ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲ್ಲಿದ್ದಾರೆ. ರಾಜ್ಯದ ಹಲವೆಡೆ 6 ಸರ್ಕಾರಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

Comments are closed.