ಕರ್ನಾಟಕ

ಹಕ್ಕು ಪತ್ರ ನೀಡಲು ಬೈಕ್​ನಲ್ಲಿ ಗಲ್ಲಿ ಸುತ್ತಿದ ಕುಮಾರಸ್ವಾಮಿ; ಸುಸ್ತಾದ ಪೊಲೀಸರು!

Pinterest LinkedIn Tumblr


ಬೆಂಗಳೂರು: ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬೈಕ್​ನಲ್ಲಿ ತೆರಳಿ, ಗಲ್ಲಿಯಲ್ಲಿ ತಿರುಗಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು. ಸಿಎಂ ಅವರ ದಿಢೀರ್​ ರೌಂಡ್ಸ್​ನಿಂದಾಗಿ ಭದ್ರತೆ ಹಾಗೂ ರೋಡ್​ ಕ್ಲಿಯರ್​ ಮಾಡಲು ಪೊಲೀಸರು ಹೈರಾಣಾಗಿ ಹೋದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮ ಮುಗಿಸಿ ತೆರಳುವಾಗ ಸಿಎಂ ಕುಮಾರಸ್ವಾಮಿ ಅವರು ಮುಖ್ಯ ಮಾರ್ಗ ಬಿಟ್ಟು ಗಲ್ಲಿಯಲ್ಲಿರುವ ಮನೆಗಳ ಬಳಿಗೆ ಸ್ವತಃ ತಾವೇ ನಡೆದು ಹೋಗಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು.

ಇದಕ್ಕು ಮುನ್ನ ಸಿಎಂ ಕುಮಾರಸ್ವಾಮಿ ಅವರು ಬೈಕ್​ನಲ್ಲಿ ತೆರಳಿ ಹಲವರಿಗೆ ಹಕ್ಕು ಪತ್ರ ವಿತರಣೆ ಮಾಡಿದರು. ಸಿಎಂ ಹೀಗೆ ಮಾಡುತ್ತಾರೆ ಎಂಬ ಮಾಹಿತಿ ಗೊತ್ತಿಲ್ಲದೇ ಪೊಲೀಸರು ಸುಸ್ತಾಗಿ ಹೋದರು. ಡಿಢೀರನೇ ಆದ ಈ ಬೆಳವಣಿಗೆಯಿಂದ ಸಿಎಂ ಓಡಾಡುವ ರಸ್ತೆ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಡಬೇಯಾಯಿತು. ಅಷ್ಟೇ ಅಲ್ಲದೇ, ಸಿಎಂ ಅಲ್ಲಿ ಬರ್ತಾರೆ, ಇಲ್ಲಿ ಬರ್ತಾರೆ ಎಂದು ಓಡಿ ಓಡಿ ಪೊಲೀಸರು ಸುಸ್ತಾಗಿ ಹೋದರು.

Comments are closed.